ರಕ್ಷಾ ರಾಮಯ್ಯಗೆ ಚಿಕೆಟ್‌ ಖಚಿತ: ಎಂಎಲ್ಸಿ ಸೀತಾರಾಂ

| Published : Mar 26 2024, 01:15 AM IST

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು, ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ಸೀತಾರಾಂ ಅವರಿಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯಗೆ ಟಿಕೆಟ್ ಸಿಗಲಿ ಎಂದು ಪ್ರಾರ್ಥಿಸಿ ರಕ್ಷಾರಾಮಯ್ಯನವರ ತಂದೆ ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಕಾಲಜ್ಞಾನಿ ಶ್ರೀ ಕೈವಾರ ಯೋಗಿನಾರೇಯಣ ತಾತಯ್ಯ ನವರ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಶ್ರೀ ಯೋಗಿನಾರೇಯಣ ದೇವಾಲಯ ಹಾಗೂ ತಾಲ್ಲೂಕಿನ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ರಕ್ಷಾರಾಮಯ್ಯಗೆ ಟಿಕೆಟ್ ಸಿಗಲಿ ಅಂತ ವಿಶೇಷ ಪೂಜೆ ಮತ್ತು ಅರ್ಚನೆ ಮಾಡಿಸಿ, ದೇವರ ದರ್ಶನ ಪಡೆದಿದ್ದಾರೆ. ಟಿಕೆಟ್‌ ಸಿಗುವ ವಿಶ್ವಾಸವಿದೆ

ಈ ವೇಳೆ ಮಾತನಾಡಿದ ಎಂ.ಆರ್.ಸೀತಾರಾಂ ಕಾಂಗ್ರೆಸ್ ನಲ್ಲಿ ಮೂವರು ಆಕಾಂಕ್ಷಿಗಳು‌ ಇದ್ದಾರೆ. ಟಿಕೆಟ್‌ ಆಕಾಂಕ್ಷಿಗಳಾದ ವೀರಪ್ಪಮೊಯ್ಲಿ ಅಥವಾ ಶಿವಶಂಕರರೆಡ್ಡಿ ಯವರ ಬಗ್ಗೆ ಟೀಕೆ ಮಾಡುವುದಿಲ್ಲ. ನನ್ನ ಮಗನಿಗೆ ಟಿಕೆಟ್ ಸಿಗುವ ಆತ್ಮವಿಶ್ವಾಸ ನನಗಿದೆ ಎಂದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕೊನೆಗೂ ರಕ್ಷಾ ರಾಮಯ್ಯ ಪರ ಹೈಕಮಾಂಡ್ ವಲವು ತೋರಿದ್ದು ನಮ್ಮ ಸಾಮರ್ಥ್ಯ ಹಾಗೂ ಜನ ಬೆಂಬಲವನ್ನು ನೋಡಿ, ಈ ದಿನ ಅಥವಾ ನಾಳೆ ಟಿಕೆಟ್ ಘೋಷಣೆಯಾಗಲಿದೆ ಎಂದು ಹೇಳಿದರು.

ರಕ್ಷಾ ರಾಮಯ್ಯ ಗೆಲ್ಲುವ ವಿಶ್ವಾಸ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಅವಲ ರೆಡ್ಡಿ, ದೇವಸ್ಥಾನ ಹೊಸಳ್ಳಿ ಚಂದ್ರಣ್ಣ, ತಾ.ಪಂ ಮಾಜಿ ಅಧ್ಯಕ್ಷ ದಿಬ್ಬೂರು ಸುಬ್ಬರಾಯಪ್ಪ, ದಯಾನಂದ್. ಯೂಥ್ ಕಾಂಗ್ರೆಸ್ ಅಧ್ಯಕ್ಷ ಕುಬೇರ್ ಅಚ್ಚು, ಡ್ಯಾನ್ಸ್ ಶ್ರೀನಿವಾಸ್, ಉಪನ್ಯಾಸಕ ಎಂ.ವೆಂಕಟೇಶ್, ರಾಜಣ್ಣ, ಮತ್ತಿತರರು ಇದ್ದರು.