ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ಖಾಲಿ ಚೆಂಬು

| Published : Apr 24 2024, 02:19 AM IST

ಸಾರಾಂಶ

ಓಟ್ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಅಲ್ಪಸಂಖ್ಯಾತ ಮುಸಲ್ಮಾನರಿಗೆ ೧೦ ಸಾವಿರ ಕೋಟಿ ನೀಡುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ, ಆದರೆ ಸಾವಿರಾರು ಕೋಟಿ ನಷ್ಟಗೊಂಡು ಆತ್ಮಹತ್ಯೆ ಮಾಡಿಕೊಂಡ ರಾತ ಸಾಲ ಮನ್ನಾ ಮಾಡಲಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯದ ಅಭಿವೃದ್ದಿ ಶೂನ್ಯವಾಗಿದ್ದು ಜನತೆಗೆ ಖಾಲಿ ಚೊಂಬು ನೀಡಿದೆ. ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ವೈಭವೀಕರಿಸುತ್ತಿರುವ ಕಾಂಗ್ರೆಸ್‌ ವಿರುದ್ದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ ನೀಡುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡಬೇಕೆಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರ ಅಭಿವೃದ್ದಿಗೆ ಮೀಸಲಾಗಿಟ್ಟಿದ್ದ ೧೧ ಸಾವಿರ ಕೋಟಿ ರೂ ಹಣವನ್ನು ರಾಜ್ಯ ಸರ್ಕಾರವು ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದರು, ರೈತರ ಸಾಲ ಮನ್ನಾ ಮಾಡಿಲ್ಲ

ಓಟ್ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಅಲ್ಪಸಂಖ್ಯಾತ ಮುಸಲ್ಮಾನರಿಗೆ ೧೦ ಸಾವಿರ ಕೋಟಿ ನೀಡುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ, ಆದರೆ ಸಾವಿರಾರು ಕೋಟಿ ನಷ್ಟಗೊಂಡು ೬೯೨ ಮಂದಿ ರೈತರು ಆತ್ಮಹತ್ಯೆ ಮಾಡಿ ಕೊಂಡರು ಸಹ ರೈತರ ಬರಪರಿಹಾರಕ್ಕೆ ಅಥವಾ ರೈತರ ಸಾಲಮನ್ನಾ ಮಾಡಲು ಮುಂದಾಗಲಿಲ್ಲ ಎಂದು ದೂರಿದರು.ಹುಬ್ಬಳಿಯ ಕಾರ್ಪೊರೇಟರ್‌ ಕಾಂಗ್ರೆಸ್ಸಿಸ್ಸ್‌ನವರಾಗಿದ್ದರೂ ಅವರ ಮಗಳಾದ ನೇಹ ಹಿರೇಮಠ್‌ಕೊಲೆ ಪ್ರಕರಣದ ಹಿಂದೆ ಇರುವ ಆರೋಪಿಗಳನ್ನು ಬಂಧಿಸಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಹೆಣ್ಣು ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲ, ಅರೋಪಿ ಫಯಾಜ್ ಎಂಬಾತ ಕುಟುಂಬದವರ ರಕ್ಷಣೆ ಪೊಲೀಸ್ ಭದ್ರತೆ ನೀಡಿದೆ ಎಂದು ಆರೋಪಿಸಿದರು.

ಪರಿಶಿಷ್ಟರ ಅನುದಾನ ಕಡಿತ

ಮೋದಿಯ ಅಭಿವೃದ್ದಿ ಕಾರ್ಯಗಳ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲಾರದ ಮಂತ್ರಿಗಳು ತಮ್ಮ ಮಕ್ಕಳು, ಕುಟುಂಬದವರನ್ನು ಸ್ಪರ್ಧೆಗೆ ಇಳಿಸುವ ಮೂಲಕ ಲೈಫ್ ಸೆಟ್ಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ, ಸಿದ್ದು ಉಚಿತ ವಿದ್ಯುತ್ ಜೊತೆಗೆ ಕತ್ತಲೆ ಭಾಗ್ಯವನ್ನು ನೀಡಿದ್ದಾರೆ. ಶಿಕ್ಷಣ, ನೀರಾವರಿ, ನಗರಾಭಿವೃದ್ದಿ, ಪರಿಶಿಷ್ಟ ಜಾತಿ, ಪಂಗಡದ ಅನುದಾನಗಳಲ್ಲಿ ಕಡಿತ ಮಾಡಿ ಖಾಲಿ ಚೆಂಬು ನೀಡಿದ್ದಾರೆ ಎಂದು ಟೀಕಿಸಿದರು.ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿನ ವೈಫಲ್ಯತೆಗಳ ವಿರುದ್ದ ಬಿಜೆಪಿ ಜೆ.ಡಿ.ಎಸ್ ಮೈತ್ರಿ ಅಭ್ಯರ್ಥಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು, ಕಾಂಗ್ರೇಸ್ ಪಕ್ಷದ ಸಾಧನೆ ಖಾಲಿ ಚೆಂಬಿಗೆ ಎನ್.ಡಿ.ಎ ಅಭಿವೃದ್ದಿಯನ್ನು ತುಂಬಿಸಿ ಅಕ್ಷಯ ಪಾತ್ರೆಯನ್ನಾಗಿಸಲು ಮತ ನೀಡುವ ಮೂಲಕ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.

ರಾಜ್ಯ ಮಹಿಳಾ ಉಸ್ತುವಾರಿ ಗೀತಾ ವಿವೇಕನಂದ ರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಹನುಮಂತಪ್ಪ, ಕಪಾಲಿ ಶಂಕರ್, ಪ್ರವೀಣ್‌ಗೌಡ, ರಾಜು, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಮಹೇಶ್, ರಾಜಕುಮಾರ್ ಇದ್ದರು.