ಸಿದ್ದರಾಮಯ್ಯ ಸರ್ವ ಜನಾಂಗದ ತೋಟ : ಎಂ.ಸಿ.ಸುಧಾಕರ್

| Published : Apr 25 2024, 01:05 AM IST / Updated: Apr 25 2024, 04:42 AM IST

ಸಿದ್ದರಾಮಯ್ಯ ಸರ್ವ ಜನಾಂಗದ ತೋಟ : ಎಂ.ಸಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಒಕ್ಕಲಿಗರ ಬಗ್ಗೆ ಕಾಳಜಿ ತೋರುತ್ತಿರುವವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತದಾವಧಿಯಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಯನ್ನು ಸ್ಥಾನದಿಂದ ಕೆಳಕ್ಕಿಳಿಸಿದಾಗ ಸಮುದಾಯದ ಅರಿವು ಇರಲಿಲ್ಲವೇ

 ಚಿಕ್ಕಬಳ್ಳಾಪುರ :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಜಾತಿಯ ಪರವಾಗಿ ಇಲ್ಲಾ, ಸಿದ್ದರಾಮಯ್ಯ ಅವರು ಸರ್ವ ಜನಾಂಗದ ತೋಟ ಇದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಒಕ್ಕಲಿಗ ಸಮುದಾಯದ ವಿರೋಧಿ ಎಂದು ಟೀಕಿಸುತ್ತಿದ್ದಾರೆ. ಆದರೆ, ಕೆಂಪೇಗೌಡ ಜಯಂತಿ ಜೊತೆಗೆ ಪ್ರಾಧಿಕಾರ ಮಾಡಿದ್ದು ಸಿದ್ದರಾಮಯ್ಯ ಅವರು. ನಾವು 5 ಜನ ಸಚಿವರು ಒಕ್ಕಲಿಗ ಸಮುದಾಯದವರಿದ್ದೇವೆ ಎಂದರು. 

ಎನ್‌ಡಿಎ ಅಭ್ಯರ್ಥಿ ಒಕ್ಕಲಿಗ ವಿರೋಧಿ

ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಒಕ್ಕಲಿಗ ವಿರೋಧಿ, ತಮ್ಮ ಅಧಿಕಾರದ ಅವಧಿಯಲ್ಲಿ ಒಕ್ಕಲಿಗ ಸಮುದಾಯದ ಹಲವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಕಿರುಕುಳ ನೀಡಿದವರು, ಒಕ್ಕಲಿಗರ ಬಗ್ಗೆ ಕಾಳಜಿ ತೋರುತ್ತಿದ್ದಾರೆ. 

ಅವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತದಾವಧಿಯಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಯನ್ನು ಸ್ಥಾನದಿಂದ ಕೆಳಕ್ಕಿಳಿಸಿದ್ದಾಗ ಸಮುದಾಯದ ಅರಿವು ಇರಲಿಲ್ಲವೇ ಎಂದು ಪ್ರಶ್ನಿಸಿದರು.ದೇಶದ ಪ್ರಧಾನಿ ಕೆಳ ಮಟ್ಟದ ರಾಜಕೀಯಕ್ಕೆ ಇಳಿದಿರುವುದು ವಿಷಾದನೀಯ. ಹೆಚ್ಚು ಮಕ್ಕಳನ್ನು ಹೊಂದಿರುವರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಮುಸ್ಲಿಮರ ಬಗ್ಗೆ ಹೇಳಿಕೆ ಕೊಟ್ಟಿದ್ದು. ಮಹಿಳೆಯರ ಮಾಂಗಲ್ಯ ಕದಿಯುತ್ತಿದೆ ಎಂಬ ಹೇಳಿಕೆ ಕೊಟ್ಟಿರುವುದು ಖಂಡನೀಯ. ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಇತಂಹ ಹೇಳಿಕೆ ಕೊಟ್ಟಂತವರ ಬಗ್ಗೆ ಚುನಾವಣೆ ಆಯೋಗ ಗಮನ ವಹಿಸಬೇಕೆಂದು ತಿಳಿಸಿದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕೋಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುಹಳ್ಳಿ ಎನ್.ರಮೇಶ್, ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಕೆ.ಎಂ.ಮುನೇಗೌಡ, ಎಂ.ವಿ.ಕೃಷ್ಣಪ್ಪ ಇದ್ದರು.