ಪ್ರಧಾನಿ ಮೋದಿ ಅವರ ಹೆಸರ ಎಲ್ಲರಿಗೂ ಗೊತ್ತಿದೆ. ಆದರೆ ಅವುಗಳು ಮತವಾಗಿ ಬದಲಾಗಬೇಕಾದರೆ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಮುಖ್ಯ. ಇಲ್ಲಿ ಜೆಡಿಎಸ್- ಬಿಜೆಪಿ ಅಭ್ಯರ್ಥಿ ಮಲ್ಲೇಶ್‌ಬಾಬು ಅವರನ್ನು ಗೆಲ್ಲಿಸಲು ಶ್ರಮಿಸಬೇಕು.
ಮಾಲೂರು: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತರಾಗಿದ್ದರೂ ಅವರ ಆಶಯದಂತೆ 400 ಸ್ಥಾನಗಳಿಸಬೇಕಾದರೆ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಬಹಳ ಮುಖ್ಯ. ಇನ್ನೆರಡು ದಿನ ಹಗಲು ರಾತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಹಾಗೂ ಉಸ್ತುವಾರಿ ಗೀತಾ ವಿವೇಕ ರೆಡ್ಡಿ ಹೇಳಿದರು.
ಅವರು ಇಲ್ಲಿನ ಆರ್.ಜೆ.ರೆರ್ಸಾಟ್ ನಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಬೂತ್ ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿ, ಮೋದಿ ಅವರ ಹೆಸರ ಎಲ್ಲರಿಗೂ ಗೊತ್ತಿದೆ. ಆದರೆ ಅವುಗಳು ಮತವಾಗಿ ಬದಲಾಗಬೇಕಾದರೆ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಮುಖ್ಯ. ಇಲ್ಲಿ ಜೆಡಿಎಸ್- ಬಿಜೆಪಿ ಅಭ್ಯರ್ಥಿ ಮಲ್ಲೇಶ್‌ಬಾಬು ಅವರನ್ನು ಗೆಲ್ಲಿಸಲು ಶ್ರಮಿಸುವಂತೆ ಮನವಿ ಮಾಡಿದರು.
ಎನ್‌ಡಿಎಗೆ ಉತ್ತಮ ವಾತಾವರಣಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದ್ದು, ಮೋದಿ ಅಲೆ ಬಿರುಗಾಳಿಯಾಗಿ ಬೀಸುತ್ತಿದೆ. ಮೈತ್ರಿ ಆದ ಮೇಲೆ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಆದರೆ ಇದರಿಂದ ಮೈಮರೆಯಬಾರದು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲಲು ಇದು ಒಂದು ಕಾರಣವಾಗಿತ್ತು ಎಂಬುದನ್ನು ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಕ.ಜಿ.ಇ.ರಾಮೇಗೌಡ, ಮಾಗೇರಿ ನಾರಾಯಣಸ್ವಾಮಿ,ಚಂದ್ರಶೇಖರ್ ಗೌಡ,ಅಪ್ಪಿ ರಾಜು,ಬಿ.ಕೆ.ನಾರಾಯಣಸ್ವಾಮಿ,ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಪಂಚೆ ನಂಜುಂಡಪ್ಪ, ಬೆಳ್ಳಾವಿ ಸೋಮಣ್ಣ, ವೇಣು ಗೋಪಾಲ್. ಟಿ.ರಾಮಚಂದ್ರ, ಬಾಬು, ತೇಜಸ್, ಪಿ.ವೆಂಕಟೇಶ್ ಕುಮಾರ್ ಇದ್ದರು,