ಕೋಲ್ಕತಾ: ಇತ್ತೀಚೆಗಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ್ದ ಸುಶ್ಮಿತಾ ದೇವ್‌ ಸೇರಿದಂತೆ ಮೂವರು ಸಂಸದರು ಗುರುವಾರ ಇಲ್ಲಿ ಬಿಜೆಪಿ ಸೇರಿದರು. 

ಬಿಜೆಪಿ ಅಧ್ಯಕ್ಷ ಸಾಮಿಕ್ ಭಟ್ಟಾಚಾರ್ಯ ಅವರ ಸಮ್ಮುಖ

ಸುಶ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್‌ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮಿಕ್ ಭಟ್ಟಾಚಾರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

ಬಿಜೆಪಿಯೊಂದಿಗಿದ್ದರು, ಅಲ್ಲಿಗೇ ಹೋದರು

ಇದಕ್ಕೆ ಟಿಎಂಸಿಯ ಸೌಗತ ರಾಯ್ ಪ್ರತಿಕ್ರಿಯಿಸಿದ್ದು, ‘ಇದರಲ್ಲಿ ಹೊಸದೇನಿದೆ? ಅವರು ಬಿಜೆಪಿಯೊಂದಿಗಿದ್ದರು, ಅಲ್ಲಿಗೇ ಹೋದರು. ಪಕ್ಷ ಬದಲಿಸುವವರಿಂದ ಬಿಜೆಪಿಗೆ ಯಾವುದೇ ಲಾಭವಾಗಬಹುದು ಅನ್ನಿಸುವುದಿಲ್ಲ. ನಮ್ಮ ಪಕ್ಷಕ್ಕೆ ನಷ್ಟವಿಲ್ಲ’ ಎಂದಿದ್ದಾರೆ.