ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಹೇಳಿದ್ದಾರೆ. ಆದರೆ ಇತರ ಧರ್ಮಗಳಲ್ಲಿ ಮತ್ತು ಅವರದೇ ಪಕ್ಷದೊಳಗೆ ಇರುವ ಅಸಮಾನತೆಯನ್ನು ಮರೆಮಾಚುತ್ತಿದ್ದಾರೆ. ಜಾತಿ ವ್ಯವಸ್ಥೆಯನ್ನು ಟೀಕಿಸುವ ಸಿದ್ದರಾಮಯ್ಯನವರೇ ಜಾತಿ ರಾಜಕಾರಣ ಮಾಡುತ್ತಿರುವುದು ವಿಪರ್ಯಾಸ.
ಸಿ.ಟಿ ರವಿ
ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಮೈಸೂರಿನಲ್ಲಿ ಮಾತನಾಡುತ್ತಾ ಸಮಾಜದಲ್ಲಿ ಇದೆ ಅಂತ ಹೇಳಿದ್ದೀರಿ. ಅಸಮಾನತೆ ಬರೀ ಹಿಂದೂ ಸಮಾಜದಲ್ಲಿ ಮಾತ್ರ ಇದೆಯೇ? ಉಳಿದ ಕಡೆ ಇಲ್ಲವೇ?
ಇದೆ. ಅಸಮಾನತೆ ಶ್ರೀಮಂತ-ಬಡವರ ನಡುವೆಯೂ ವಿದ್ಯಾವಂತ-ಅವಿದ್ಯಾವಂತರ ನಡುವೆಯೂ ಇದೆ. ಒಂದೇ ಜಾತಿಯಲ್ಲಿ ಇದ್ದರೂ ವಿವಿಧ ಅಧಿಕಾರದ ಹುದ್ದೆಯಲ್ಲಿರುವವರ ನಡುವೆಯೂ ಅಸಮಾಧಾನತೆ ಇದೆ, ಅಸಮಾನತೆ ಇದೆ. ಅಸಮಾನತೆಗೆ ಹಲವು ಮುಖಗಳಿವೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅಸಮಾನತೆ, ಅಧಿಕಾರದ ಅಸಮಾನತೆ, ಮತೀಯ ಅಸಮಾನತೆ. ಅಷ್ಟೆ ಯಾಕೆ ನಿಮ್ಮ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ಲೇ ಸಿದ್ದರಾಮಯ್ಯನವರೇ? ಇತ್ತೀಚೆಗೆ ರಾಹುಲ್ ಗಾಂಧಿಯವರ ವೋಟ್ ಚೋರಿಯ ಆರೋಪ ಸರಿ ಅಲ್ಲ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ರಾಜಣ್ಣ ತಮ್ಮ ಸಚಿವ ಸ್ಥಾನವನ್ನೇ ತೊರೆಯಬೇಕಾಯಿತು. ಇದು ಅಸಮಾನತೆ ಅಲ್ಲವೇ?
ನಿಮ್ಮ ಪಕ್ಷದ ನಾಯಕರು ಜಗತ್ತಿಗೇ ಸಮಾನತೆ, ಮಿತೃತ್ವ ಭ್ರಾತ್ರತ್ವದ ಪಾಠ ಮಾಡುತ್ತಾರೆ. ಆದರೆ ಅದನ್ನು ಪಾಲಿಸಬೇಕಾದ ನೈತಿಕ ಜವಾಬ್ದಾರಿ ಹೆಗಲ ಮೇಲೇರಿದಾಗ ಅಸಹಿಷ್ಣುಗಳಾಗಿ ತಾರತಮ್ಯವನ್ನು ತೋರುತ್ತೀರಿ. ಇದೇ ಕಾರಣಕ್ಕೆ ತಾನೇ ತಾವು ತಮ್ಮದೇ ಪಕ್ಷದ ರಾಜ್ಯ ಅಧ್ಯಕ್ಷರ ಬಳಿಯಿಂದ ಬಹಿರಂಗವಾಗಿ ಕ್ಷಮಾಪಣೆ ಕೇಳಿಸಿದಿರಿ. ಅಷ್ಟಕ್ಕೂ ಅವರು ಮಾಡಿದ ತಪ್ಪೇನು? ಸದನದೊಳಗೆ 'ನಮಸ್ತೆ ಸದಾ ವತ್ಸಲೆ ಮಾತೃಭೂಮಿ' ಅಂದರು. ತಾಯಿ ಭಾರತೀಯ ಸ್ತುತಿಯನ್ನು ನಿಮ್ಮಿಂದ ಸಹಿಸಲಾಗದೆ ಅಸಮಾನತೆ ತೋರಿದಿರಿ. ಇನ್ನು ಗೃಹ ಸಚಿವರಾದ ಪರಮೇಶ್ವರ್ ಅವರು ಯಾರು ಅಸಮಾನತೆ ತೋರಿದ ಕಾರಣ ಚುನಾವಣೆಯಲ್ಲಿ ಸೋತು ಮುಖ್ಯಮಂತ್ರಿ ಅಗಲಿಲ್ಲ ಎಂದು ಬೇರೆಯಾಗಿ ಹೇಳಬೇಕಿಲ್ಲ. ಅದೆಷ್ಟು ಭಾರಿ ಸ್ವತಃತಾವೇ ಅದೆಷ್ಟು ಅಸಮಾನತೆಗೆ ಗುರಿಯಾಗಿಲ್ಲ. ನಿಮ್ಮ ಪಕ್ಷದ ದೆಹಲಿ ನಾಯಕರೇ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ ಹೇಳಿ. ನಿಮ್ಮದೇ ಆಪ್ತ ವಲಯದಲ್ಲಿ ಅದನ್ನು ಹೇಳಿಕೊಂಡು ಹಲುಬಿದ್ದೀರಿ ಕೂಡ.
ಕ್ರೈಸ್ತ, ಮುಸ್ಲಿಮರಲ್ಲೇಕೆ ಪಂಗಡ ಇವೆ?
ಹಿಂದುಗಳನ್ನು ಹೊರತುಪಡಿಸಿ ಬೇರೆಲ್ಲೂ ಅಸಮಾನತೆ ಇಲ್ಲದಿದ್ದರೆ ಕ್ರಿಶ್ಚಿಯನ್‌ಗಳಲ್ಲಿ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಪೆಂತಕೋಸ್ಟ್ ಪಂಗಡಗಳು ಯಾಕೆ ಇದ್ದಾವೆ? 'ದಲಿತ ಕ್ರಿಶ್ಚಿಯನ್' ಎಂಬ ಪದ ಯಾಕೆ ಸೃಷ್ಟಿಯಾಗಬೇಕಾಗಿತ್ತು? ಶ್ರೀಮಂತ ಕ್ಯಾಥೋಲಿಕ್ ಹಾಗೂ ದಲಿತ ಕ್ರಿಶ್ಚಿಯನ್‌ಗಳಿಗೆ ಯಾಕೆ ಮದುವೆಯ ಸಂಬಂಧ ಇನ್ನೂ ಇಲ್ಲ? ಅಸಮಾನತೆ ಮುಸ್ಲಿಮರ ನಡುವೆಯೂ ಇದೆ. ಅಸಮಾನತೆ ಕ್ರಿಶ್ಚಿಯನ್‌ಗಳ ನಡುವೆಯೂ ಇದೆ. ಕರಿಯರು, ಬಿಳಿಯರು ಎನ್ನುವ ಅಸಮಾನತೆ. ಇನ್ನು ಮುಸ್ಲಿಮರಲ್ಲಿ ಶಿಯಾ, ಸುನ್ನಿ, ಅಹಮದಿಯಾ, ಸಲಫಿ, ಸೂಫಿ ಎಂಬ ಗುಂಪುಗಳುಯಾಕಿದ್ದಾವೆ? ಮುಸಲ್ಮಾನರಲ್ಲೇ ಐವತ್ತಕ್ಕೂ ಹೆಚ್ಚು ಒಳಪಂಗಡಗಳು,ಉಪಪಂಗಡಗಳಿವೆ ಅವುಗಳ ಸಮೀಕ್ಷೆಯನ್ನು ತಾವು ಯಾಕೆ ಮಾಡಿಸುತ್ತಿಲ್ಲ? ಅಲ್ಲಿರುವ ಅಸ್ಪೃಶ್ಯತೆ, ಅಸಮಾನತೆಯ ಬಗ್ಗೆ ಸಮೀಕ್ಷೆಯಲ್ಲಿ ಏಕೆ ಅವಕಾಶ ಮಾಡಿಕೊಡುತ್ತಿಲ್ಲ? ಒಂದೇ ದೇವರು, ಒಬ್ಬನೇ ಪ್ರವಾದಿ, ಒಂದೇ ಧರ್ಮಗ್ರಂಥ ಇದ್ದರೂ, ಪರಸ್ಪರ ಬಾಂಬ್ ಹಾಕಿಯಾಕೆ ಕೊಲ್ಲುತ್ತಿದ್ದಾರೆ? ಅಂಥವರ ಒಳಗಿರುವ ಅಸಮಾನತೆಯ ಬಗ್ಗೆ ತಮ್ಮದು ದಿವ್ಯ ಮೌನವೇಕೆ? ಮುಸಲ್ಮಾನರಿಗ ಸಿಗುವ ಒಟ್ಟು ಮೀಸಲಾತಿಯಲ್ಲಿ ಒಳಪಂಗಡದ ಪವರ್ ಪಾಟ್ ಲೋಕ ಶ್ರೇಯಸ್ಸು ಬಯಸುವ ಧರ್ಮ ನಮ್ಮದು ಉಳಿದ ಮತಗ್ರಂಥಗಳು ಕೇವಲ ತಮ್ಮ ಸಮಾಜದವರ ಶ್ರೇಯಸ್ಸನ್ನು ಮಾತ್ರ ಬಯಸಿದರೆ, ತಮ್ಮ ಮತದವರ ಶ್ರೇಯಸ್ಸನ್ನು ಮಾತ್ರ ಬಯಸಿದರೆ, ಹಿಂದೂ ಧರ್ಮ ಲೋಕದ ಶ್ರೇಯಸ್ಸನ್ನು ಬಯಸಿತು, ಲೋಕದಸುಖವನ್ನು ಬಯಸಿತು.ಅಸಮಾನತೆಯನ್ನು ಸಮರ್ಥಿಸುವ ಒಂದು ವೇದ ಮಂತ್ರವನ್ನು ತೋರಿಸಿ. ಅಸಮಾನತೆಯನ್ನು ಸಮರ್ಥಿಸುವ ಒಂದು ವಚನವನ್ನು ತೋರಿಸಿ. ಅಸಮಾನತೆಯನ್ನು ಸಮರ್ಥಿಸುವ ಒಂದು ದಾಸವಾಣಿಯನ್ನು ವೇದಗಳಿರಬಹುದು, ವಚನಗಳಿರಬಹುದು,
ತೋರಿಸಿ. ದಾಸವಾಣಿ ಇರಬಹುದು ಇವೆಲ್ಲದರಲ್ಲೂ ಅಸಮಾನತೆಯನ್ನು ತೊಡೆದು ಹಾಕಲು ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ಅಸಮಾನತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದ ಬುದ್ಧ, ಬಸವಣ್ಣ, ರಾಮಾನುಜಾಚಾರ್ಯ, ಕನಕದಾಸರಂಥವರನ್ನೇ ಮುಂದಿಟ್ಟುಕೊಂಡು ಜಾತಿಯತೆ ಮಾಡುವವರಿಗೆ ಏನನ್ನ ಬೇಕು? ಹಿಂದೂಗಳಲ್ಲಿ ಇರುವ ಅಸಮಾನತೆಯನ್ನು ಸರಿಪಡಿಸಲು ಭಗವಾನ್ ಬುದ್ಧ, ರಾಮಾನುಜಾಚಾರ್ಯ, ಭಗವಾನ್ ಶಂಕರರು, ಬಸವಣ್ಣನವರು, ಕನಕದಾಸರು, ಸರ್ವಜ್ಞ ಸೇರಿದಂತೆ ನೂರಾರು ಸಂತ ಮಹಂತರು ದೇಶದ ಉದ್ದಗಲಕ್ಕೆ ನಿಜ ಧರ್ಮವನ್ನು ತಿಳಿಸುವ ಸರ್ವ ಪ್ರಯತ್ನವನ್ನು ಮಾಡುತ್ತಿದ್ದಾರೆ ಮತ್ತು ಭಾಗಶಃ ಯಶಸ್ವಿಯೂ ಆಗಿದ್ದಾರೆ. ಆದರೆ ನಿಮ್ಮಂಥ ಕೆಲವರು ಅಸಮಾನತೆಯನ್ನು ಸಮಾಜ ಒಡೆಯಲು ಉಪಯೋಗಿಸಿಕೊಂಡಿದ್ದೀರಿ. ಅನುಪಾತಕ್ಕೆ ಸರಿಯಾಗಿ ಅವರಿಗೆ ಒಳ ಮೀಸಲಾತಿ ಯಾಕೆ ಕೊಡುತ್ತಿಲ್ಲ? ಬಹುಶಃ ಅವರಪರಿ ಸ್ಥಿತಿ ಹಾಗೂ ನಿಮ್ಮ ಪಕ್ಷದೊಳಗಿರುವ ಅಸಮಾನತೆಯ ಪರಿಸ್ಥಿತಿ ಎರಡೂ ಒಂದೇ ಇರಬೇಕು. ಹೇಳಿಕೊಂಡರೆ ಒಂದು ರೀತಿಯ ಸಂಕಷ್ಟ ಹೇಳಿಕೊಳ್ಳದೇ ಹೋದರೆ ಮತ್ತೊಂದು ರೀತಿಯ ಸಂಕಷ್ಟ.
ಮತಾಂತರವಾದವರಿಗೂ ಜಾತಿ ಏಕೆ?
ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯ ಅಸಮಾನತೆ ಇದೆ ಅನ್ನುವ ಏಕೈಕ ಕಾರಣ ಕೊಟ್ಟು ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡಿ ಏಸು ಕ್ರಿಸ್ತರ ಎದುರು ಸಮಾನವಾಗಿ, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಅಂದವರು ಸಮಾಜದೊಳಗಿರುವ ಅಷ್ಟೂ ಜಾತಿಗಳಿಗೆ ಹಿಂದೆ ಕ್ರೈಸ್ತ ಎನ್ನುವ ಹೆಸರು ಸೇರಿಸಿ ಅಲ್ಲಿ ಮತ್ತೆ ಯಾಕೆ ಹಿಂದೂ ಸಮಾಜಕ್ಕೆ ಸಮಾನಾಂತರವಾದ ಜಾತಿ ವ್ಯವಸ್ಥೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೀರಿ? ಇದು ಅವರು ಯಾವ ಮೂಲ ಆಶಯದಿಂದ ಮತಾಂತರ ಆಗುತ್ತಿದ್ದಾರೋ ಅದಕ್ಕೆ ವಿರೋಧ ಅಲ್ಲವೇ? ಹೀಗಿರುವ ಟೊಳ್ಳುವಾದ ಮಾಡುವ ನಿಮಗೆ ಹಿಂದೂ ಸಮಾಜದೊಳಗೆ ದೊಡ್ಡ ಪ್ರಮಾಣದ ಅಸಮಾನತೆ ಇದೆ ಎಂದು ಬೆರಳು ತೋರಿಸುವ ನೈತಿಕತೆ ಎಲ್ಲಿದೆ? ಇದೆಲ್ಲಕ್ಕಿಂತ ದುರಂತ ಎಂದರೆ ಇಲ್ಲಾ ಅಪಸವ್ಯಗಳಿಗೆ ನಿಮ್ಮದೇ ಪೌರೋಹಿತ್ಯ ಎನ್ನುವುದು ಸಿದ್ದರಾಮಯ್ಯನವರೇ. ಆತ್ಮಾನು ಸರ್ವಭೂತೇಶು, ಪ್ರತಿಯೊಂದು ಜೀವಿಯಲ್ಲಿಯೂ ಭಗವಂತನಿದ್ದಾನೆ, ಭಗವಂತನಿಂದಲೇ ಸೃಷ್ಟಿಸಲ್ಪಟ್ಟಿದ್ದಾನೆ ಎಂಬುದನ್ನು ಹೇಳಿರುವ ಏಕೈಕ ಧರ್ಮ ನಮ್ಮ ಸನಾತನ ಧರ್ಮ; ಸರ್ವೇಜನೋ ಸುಖಿನೋ ಭವಂತು ಎಂಬುದನ್ನು ಹೇಳಿದ್ದು ಹಿಂದೂ ಧರ್ಮ ಮಾತ್ರ;
ವಸುಧೈವ ಕುಟುಂಬಕಂ ಅನ್ನುವ ಮಂತ್ರ ಕೊಟ್ಟಿದ್ದು ಹಿಂದೂ ಧರ್ಮ ಮಾತ್ರ; ಲೋಕ ಸಮಸ್ತ ಸುಖಿನೋ ಭವಂತು ಎಂದು ಲೋಕದ ಸುಖವನ್ನು ಬಯಸಿದ್ದು ಹಿಂದೂ ಧರ್ಮ ಮಾತ್ರ.
ಮುಸಲ್ಮಾನರಲ್ಲೂ ಜಾತಿಗಳಿವೆ, ಕ್ರಿಶ್ಚಿಯನ್ನರಲ್ಲೂ ಜಾತಿಗಳಿವೆ; ಜಾತಿ ತಾರತಮ್ಯವೂ ಇದೆ. ಭಾರತೀಯ ಸಂಜಾತ ಯಾವುದೇ ಧರ್ಮಗ್ರಂಥಗಳು ಜಾತೀಯತೆಯನ್ನು, ಅಸ್ಪೃಶ್ಯತೆಯನ್ನು, ತಾರತಮ್ಯವನ್ನು ಬೆಂಬಲಿಸಿಲ್ಲ. ಹಿಂದೂಗಳಲ್ಲಿ ಕೆಲ ಅಸಮಾನತೆಯ ನಡುವೆಯೂ ಸಮಾನತೆಯನ್ನು ಸಾರುವ ವೇದಗಳಿವೆ, ವಚನಗಳಿವೆ. ಅಸಮಾನತೆಯನ್ನು ತೊಡೆದು ಹಾಕಲು ರಾಷ್ಟ್ರೀಯ ಸ್ವಯಂಸೇವಕ ಸಂಘ 'ನಾವೆಲ್ಲ ಹಿಂದೂ, ನಾವೆಲ್ಲ ಒಂದು' ಎಂಬ ಬಂಧುತ್ವದ ಭಾವನೆ ಬೆಳೆಸುತ್ತಿದೆ. ಇಂಥದ್ದರ ಬಗ್ಗೆ ಅಪಪ್ರಚಾರ ಮಾಡುವ ನಿಮ್ಮ ನಾಲಿಗೆಗೆ ನಾನೇನು ಹೇಳಲಿ?
ಧರ್ಮದಿಂದ ಅಸಮಾನತೆ ಸೃಷ್ಟಿಯಾಗಿಲ್ಲ. ಜಾತಿಗಳಿಂದ ಅಸಮಾನತೆ ಸೃಷ್ಟಿಯಾಗಿದೆ;
ಆ ಜಾತಿಗಳನ್ನು ಪ್ರೋತ್ಸಾಹಿಸುತ್ತಿರುವ ಜನರಿಂದ ಅಸಮಾನತೆ ಸೃಷ್ಟಿಯಾಗಿದೆ. ಧರ್ಮ ಒಗ್ಗೂಡಿಸಿದರೆ, ಜಾತಿಯತೆ ಒಡೆಯುವ ಕೆಲಸ ಮಾಡುತ್ತಿದೆ; ಜಾತಿಯ ನೇತೃತ್ವ ವಹಿಸಿದವರು ಅಸಮಾನತೆಗೆ ನೀರೆರೆಯುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಪರಾಮರ್ಶಿಸಿಕೊಳ್ಳಿ ಮುಖ್ಯಮಂತ್ರಿಗಳೆ, ಜಾತೀಯತೆ ಮತ್ತು ಅಸ್ಪೃಶ್ಯತೆಯ ಲಾಭ ಪಡೆಯಲು ತಾವು ಹವಣಿಸುತ್ತಿದ್ದೀರಿ. ಅಸಮಾನತೆಯನ್ನು ತೊಡೆಯುವುದಕ್ಕೆ ಬದಲಾಗಿ ಜಾತಿ-ಜಾತಿಗಳನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ. ಹಿಂದೂಗಳನ್ನು ಒಡೆದು, ಉಳಿದವರನ್ನು ಓಲೈಸುವ ಕೆಲಸ ಮಾಡುತ್ತಿದ್ದೀರಿ. ಮನುಷ್ಯನಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದಂತೆ ಸಮಾಜದೊಳಗೂ ಒಳ್ಳೆಯದು, ಕೆಟ್ಟದ್ದು ಇದೆ. ಆ ಕೆಟ್ಟದ್ದನ್ನು ದೂರ ಮಾಡಬೇಕು; ಒಳ್ಳೆ ಯದನ್ನು ಮಾತ್ರ ಉಳಿಸಿಕೊಳ್ಳಬೇಕು ಎನ್ನುವುದಕ್ಕೆ ಧರ್ಮ ಇರು ವುದು. ಧರ್ಮ ತತ್ವಗಳು ಹೇಳುವುದು ಒಳ್ಳೆಯದನ್ನು ಸ್ವೀಕಾರ ಮಾಡಿ, ಕೆಟ್ಟದನ್ನು ದೂರ ಮಾಡಿ' ಅಂತ. ನೀವು ಧರ್ಮವನ್ನು ದೂರ ಮಾಡಿದರೆ ಆಗ ಉಳಿಯೋದು ಅಧರ್ಮ, ಅಂದರೆ ಕೆಟ್ಟದ್ದು ಮಾತ್ರ.