ಸಾರಾಂಶ
ಕೊಚ್ಚಿ: 4 ತಿಂಗಳ ಮಗುವಿನ ತಾಯಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆ ಮಗುವಿಗೆ ಎದೆಹಾಲು ಕುಡಿಸಿದ ಮಾನವೀಯ ಘಟನೆ ಶುಕ್ರವಾರ ಎರ್ನಾಕುಲಂನಲ್ಲಿ ನಡೆದಿದೆ.
ತಾಯಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಮಾದರಿ ಕೆಲಸ
ಕೊಚ್ಚಿ: 4 ತಿಂಗಳ ಮಗುವಿನ ತಾಯಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆ ಮಗುವಿಗೆ ಎದೆಹಾಲು ಕುಡಿಸಿದ ಮಾನವೀಯ ಘಟನೆ ಶುಕ್ರವಾರ ಎರ್ನಾಕುಲಂನಲ್ಲಿ ನಡೆದಿದೆ.ಪೊಲೀಸ್ ಅಧಿಕಾರಿಣಿ ಎಂ.ಎ. ಆರ್ಯ ನಾಲ್ಕು ತಿಂಗಳ ಮಗುವಿಗೆ ಎದೆಹಾಲು ನೀಡಿ ಪೋಷಿಸಿದ್ದಾರೆ. ಬಿಹಾರ ಮೂಲದ ಮಹಿಳೆಯೊಬ್ಬರು ಕೇರಳದಲ್ಲಿ ಕೆಲ ಸಮಯಗಳಿಂದ ವಾಸವಾಗಿದ್ದಾರೆ. 4 ಮಕ್ಕಳಿನ ತಾಯಿಯಾದ ಆಕೆ ತೀವ್ರ ಅನಾರೋಗ್ಯದಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಪತಿ ಜೈಲಿನಲ್ಲಿದ್ದ ಕಾರಣ ಮಕ್ಕಳು ದಿಕ್ಕು ದೆಸೆ ಇಲ್ಲದೆ ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದವು. ಮಿಕ್ಕ ಮೂರು ಮಕ್ಕಳಿಗೂ ಅಲ್ಲಿನ ಅಧಿಕಾರಿಗಳು ಆಹಾರ ನೀಡಿ ಮಕ್ಕಳ ಪಾಲನಾ ಕೇಂದ್ರಕ್ಕೆ ಸೇರಿಸಿದರು.
ಮಹಿಳಾ ಅಧಿಕಾರಿಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆರ್ಯಾ ಸ್ವತಃ 9 ತಿಂಗಳ ಮಗುವಿಗೆ ತಾಯಿಯಾಗಿದ್ದಾರೆ.