ಸಾರಾಂಶ
ವಿಜ್ಞಾನ ವಿಷಯ ಸಮುದ್ರವಿದ್ದಂತೆ, ನಾವು ಎಷ್ಟೇ ಕಲಿತರೂ ಅದರ ಆಳ ಹೆಚ್ಚು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಬೇಗೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಹೊರ ಬಂದ ಮಾಹಿತಿಯನ್ನು ತರಬೇತಿಗೆ ಬಂದ ಶಿಕ್ಷಕರು ಮಕ್ಕಳೊಂದಿಗೆ ಹಂಚಿಕೊಂಡು ಹೆಚ್ಚಿನ ಅಂಕಗಳಿಸಲು ತಯಾರಿಸಬೇಕು ಎಂದರು.
ಬೇಗೂರಿನ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಕರ ಕಾರ್ಯಾಗಾರ । ವಿಜ್ಞಾನ, ಗಣಿತ, ಇಂಗ್ಲೀಷ್ ನಲ್ಲಿ ಮಕ್ಕಳ ಆತಂಕ ನಿವಾರಿಸುವಂತೆ ಸಲಹೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆವಿಜ್ಞಾನ ವಿಷಯ ಸಮುದ್ರವಿದ್ದಂತೆ, ನಾವು ಎಷ್ಟೇ ಕಲಿತರೂ ಅದರ ಆಳ ಹೆಚ್ಚು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಬೇಗೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಹೊರ ಬಂದ ಮಾಹಿತಿಯನ್ನು ತರಬೇತಿಗೆ ಬಂದ ಶಿಕ್ಷಕರು ಮಕ್ಕಳೊಂದಿಗೆ ಹಂಚಿಕೊಂಡು ಹೆಚ್ಚಿನ ಅಂಕಗಳಿಸಲು ತಯಾರಿಸಬೇಕು ಎಂದರು.
ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಬಗ್ಗೆ ಬಹುತೇಕ ಮಕ್ಕಳಲ್ಲಿ ಆತಂಕ ಇರುತ್ತದೆ. ಶಿಕ್ಷಕರು ಮಕ್ಕಳಿಗೆ ಗೊತ್ತಿಲ್ಲದ ವಿಷಯಗಳನ್ನು ಸರಳವಾಗಿ ಬೋಧಿಸಿ ಮನನ ಮಾಡಿಸಬೇಕು ಎಂದರು.ವಿಜ್ಞಾನದಲ್ಲಿ ಪ್ರಾಯೋಗಿಕ ಬೋಧನೆ ಬಹಳ ಮುಖ್ಯ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕಾಳಜಿ ವಹಿಸಬೇಕು. ಕಾರ್ಯಾಗಾರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕ ಎಂದರು.
ಕಾರ್ಯಾಗಾರದಲ್ಲಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಗುರುಪ್ರಸಾದ್, ವಸತಿ ಶಾಲೆಯ ಪ್ರಾಂಶುಪಾಲ ಮಹೇಂದ್ರ, ಶಿಕ್ಷಕರಾದ ಸಿದ್ದಮಲ್ಲಪ್ಪ, ಶಿವಕುಮಾರಸ್ವಾಮಿ,ನಿಲಯ ಪಾಲಕ ಎಚ್.ಎನ್ ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ಷಡಕ್ಷರಿ, ಲಕ್ಷ್ಮಿ, ಜಯಶಂಕರ್, ಮುಖಂಡರಾದ ಹೊರೆಯಾಲ ನೀಲಕಂಠಪ್ಪ, ಹಾಲಹಳ್ಳಿ ಬಸವರಾಜು, ಶರತ್ ಹಾಗೂ ತಾಲೂಕಿನ ಪ್ರೌಢಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.----
22ಜಿಪಿಟಿ7ಗುಂಡ್ಲುಪೇಟೆ ತಾಲೂಕಿನ ಬೇಗೂರು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಶಿಕ್ಷಕರ ಕಾರ್ಯಾಗಾರದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರನ್ನು ಶಿಕ್ಷಕ ವರ್ಗದಿಂದ ಸನ್ಮಾನಿಸಲಾಯಿತು.