ಹೇಗೆ ಆಡಬೇಕೆಂದು ಚೆನ್ನಾಗಿ ಗೊತ್ತು: ಸ್ಟ್ರೈಕ್‌ರೇಟ್‌ ಟೀಕೆಗೆ ಕೊಹ್ಲಿ ಉತ್ತರ!

| Published : Apr 30 2024, 02:07 AM IST / Updated: Apr 30 2024, 04:17 AM IST

ಹೇಗೆ ಆಡಬೇಕೆಂದು ಚೆನ್ನಾಗಿ ಗೊತ್ತು: ಸ್ಟ್ರೈಕ್‌ರೇಟ್‌ ಟೀಕೆಗೆ ಕೊಹ್ಲಿ ಉತ್ತರ!
Share this Article
  • FB
  • TW
  • Linkdin
  • Email

ಸಾರಾಂಶ

ಕೊಹ್ಲಿ ನಿಧಾನ ಆಟವಾಡುತ್ತಿದ್ದಾರೆ. ಹೀಗಾಗಿ ಅವರನ್ನು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಬಾರದು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು.

ಅಹಮದಾಬಾದ್‌: ಸದಾ ತಮ್ಮ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್‌ ಬಗ್ಗೆ ಟೀಕೆ ಮಾಡುವ ಮಾಜಿ ಕ್ರಿಕೆಟಿಗರು, ಕ್ರೀಡಾ ತಜ್ಞರಿಗೆ ವಿರಾಟ್‌ ಕೊಹ್ಲಿ ಅವರು ಖಡಕ್‌ ಉತ್ತರ ನೀಡಿದ್ದು, 15 ವರ್ಷಗಳಿಂದ ತಂಡಕ್ಕಾಗಿ ಆಡಿ ಹಲವು ಪಂದ್ಯ ಗೆಲ್ಲಿಸಿರುವವರಿಗೆ ಹೇಗೆ ಆಡಬೇಕು ಎಂದು ಗೊತ್ತಿರುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ ಒಳಗೊಂಡ 70 ರನ್‌ ಸಿಡಿಸಿದ ವಿರಾಟ್‌ ಕೊಹ್ಲಿ, ಪಂದ್ಯದ ಬಳಿಕ ಮಾತನಾಡಿದರು. ‘ನನ್ನ ಸ್ಟ್ರೈಕ್‌ರೇಟ್‌ ಮತ್ತು ಸ್ಪಿಗ್ನರ್‌ಗಳ ವಿರುದ್ಧ ಆಡುವ ರೀತಿ ಬಗ್ಗೆ ಮಾತನಾಡುತ್ತಿದ್ದಾರೆ. 

ಆದರೆ ನಾನು ತಂಡದ ಅಗತ್ಯತೆಗೆ ತಕ್ಕಂತೆ ಆಡುತ್ತಿದ್ದೇನೆ. ಮೈದಾನದಿಂದ ಹೊರಗಡೆ ಕೂತು ಮಾತನಾಡುವುದು ಬಹಳ ಸುಲಭ. ಆದರೆ ತಂಡ ನನಗೆ ಕೊಟ್ಟಿರುವ ಜವಾಬ್ದಾರಿಗೆ ತಕ್ಕಂತೆ ನಾನು ಆಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕೊಹ್ಲಿ ಈ ಬಾರಿ ಕೆಲ ಪಂದ್ಯಗಳಲ್ಲಿ ನಿಧಾನ ಆಟವಾಡಿದ್ದು, ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅಲ್ಲದೆ ಅವರನ್ನು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಬಾರದು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದರು. ಅವರು ಈ ಬಾರಿ 147ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು, ಒಟ್ಟು 500 ರನ್‌ ಕಲೆಹಾಕಿದ್ದಾರೆ. ಈ ಐಪಿಎಲ್‌ನಲ್ಲಿ 500 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಎನಿಸಿಕೊಂಡಿದ್ದಾರೆ.