ಸಿಂಧು, ಸೇನ್‌, ಕನ್ನಡತಿ ಅಶ್ವಿನಿ ಸೇರಿ 7 ಶಟ್ಲರ್‌ಗಳು ಒಲಿಂಪಿಕ್ಸ್‌ಗೆ

| Published : Apr 30 2024, 02:06 AM IST / Updated: Apr 30 2024, 04:22 AM IST

ಸಿಂಧು, ಸೇನ್‌, ಕನ್ನಡತಿ ಅಶ್ವಿನಿ ಸೇರಿ 7 ಶಟ್ಲರ್‌ಗಳು ಒಲಿಂಪಿಕ್ಸ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿ.ವಿ.ಸಿಂಧು, ಲಕ್ಷ್ಯ ಸೇನ್ ಜೊತೆ ಪ್ರಣಯ್‌, ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ತನಿಶಾ-ಕರ್ನಾಟಕ ಅಶ್ವಿನಿ ಪೊನ್ನಪ್ಪ ಕೂಡಾ ಒಲಿಂಪಿಕ್ಸ್‌ ಪ್ರವೇಶಿಸಿದ್ದಾರೆ.

ನವದೆಹಲಿ: ಪಿ.ವಿ.ಸಿಂಧು, ಲಕ್ಷ್ಯ ಸೇನ್ ಸೇರಿದಂತೆ ಭಾರತದ 7 ಶಟ್ಲರ್‌ಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ನಿಯಮ ಪ್ರಕಾರ ಗಡುವು ದಿನಾಂಕದ ವೇಳೆ ಸಿಂಗಲ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-16ರಲ್ಲಿ ಇರುವವರು ಒಲಿಂಪಿಕ್ಸ್‌ ಪ್ರವೇಶಿಸುತ್ತಾರೆ. 

ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ 12ನೇ, ಪ್ರಣಯ್‌ ಹಾಗೂ ಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ ಕ್ರಮವಾಗಿ 9 ಮತ್ತು 13ನೇ ಸ್ಥಾನದಲ್ಲಿದ್ದು, ಕ್ರೀಡಾಕೂಟಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. 

ಇನ್ನು ಪುರುಷರ ಡಬಲ್ಸ್‌ನಲ್ಲಿ 3ನೇ ಸ್ಥಾನದಲ್ಲಿರುವ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ 13ನೇ ಸ್ಥಾನದಲ್ಲಿರುವ ತನಿಶಾ ಕ್ರಾಸ್ಟೊ-ಕರ್ನಾಟಕದ ಅಶ್ವಿನಿ ಪೊನ್ನಪ್ಪ ಕೂಡಾ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಸ್ಕೀಟ್‌ ಶೂಟಿಂಗ್‌: ಭಾರತದ ಮಹೇಶ್ವರಿಗೆ ಒಲಿಂಪಿಕ್ಸ್‌ಗೆ 

ದೋಹಾ: ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ಶಾಟ್‌ಗನ್‌ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಕೀಟ್‌ ಶೂಟರ್‌ ಮಹೇಶ್ವರಿ ಚೌಹಾಣ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಗೆದ್ದಿದ್ದಾರೆ. 

ಇದು ಮಹಿಳಾ ಸ್ಕೀಟ್‌ ಶೂಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ 2ನೇ ಒಲಿಂಪಿಕ್ಸ್‌ ಕೋಟಾ. ಒಟ್ಟಾರೆ ಶೂಟಿಂಗ್‌ನಲ್ಲಿ 21ನೇ ಕೋಟಾ. ಟೂರ್ನಿಯ ಸ್ಕೀಟ್‌ ವಿಭಾಗದ ಫೈನಲ್‌ನಲ್ಲಿ ಮಹೇಶ್ವರಿ ಅವರು ಚಿಲಿಯ ಫ್ರಾನ್ಸಿಸ್ಕಾ ಕ್ರೊವೆಟೊ ವಿರುದ್ಧ 3-4 ಅಂತರದಲ್ಲಿ ಸೋಲನುಭವಿಸಿದರು. ಭಾರತದ ಶೂಟರ್‌ಗಳು ಒಲಿಂಪಿಕ್ಸ್‌ನ ಗರಿಷ್ಠ 24 ಕೋಟಾ ಪೈಕಿ 21 ಕೋಟಾ ಗೆದ್ದಿದ್ದಾರೆ. ಪಿಸ್ತೂಲ್‌ ಮತ್ತು ರೈಫಲ್‌ನಲ್ಲಿ ತಲಾ 8, ಶಾಟ್‌ಗನ್‌ ವಿಭಾಗದಲ್ಲಿ 5 ಕೋಟಾಗಳು ಭಾರತಕ್ಕೆ ಲಭ್ಯವಾಗಿವೆ.