ಬೆಡ್‌ ಮೇಲೆ ಹಾರಿ ಕ್ಯಾಚ್‌ ಪ್ರಾಕ್ಟೀಸ್‌: ಟ್ರೋಲ್‌ಗೆ ಗುರಿಯಾದ ಪಾಕ್‌ ತಂಡ!

| Published : Jul 04 2024, 01:02 AM IST / Updated: Jul 04 2024, 04:29 AM IST

ಬೆಡ್‌ ಮೇಲೆ ಹಾರಿ ಕ್ಯಾಚ್‌ ಪ್ರಾಕ್ಟೀಸ್‌: ಟ್ರೋಲ್‌ಗೆ ಗುರಿಯಾದ ಪಾಕ್‌ ತಂಡ!
Share this Article
  • FB
  • TW
  • Linkdin
  • Email

ಸಾರಾಂಶ

ಮೈದಾನದಲ್ಲಿ ಬೆಡ್‌, ಮ್ಯಾಟ್‌ಗಳನ್ನಿಟ್ಟು ಆಟಗಾರರು ಕ್ಯಾಚ್‌ ಅಭ್ಯಾಸ ನಡೆಸುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಕರಾಚಿ: ಟಿ20 ವಿಶ್ವಕಪ್‌ಗೂ ಮುನ್ನ ಸೇನೆಯಲ್ಲಿ ತರಬೇತಿ ಪಡೆಯುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್‌ ಆಟಗಾರರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ ಬೆಡ್‌, ಮ್ಯಾಟ್‌ಗಳನ್ನಿಟ್ಟು ಆಟಗಾರರು ಕ್ಯಾಚ್‌ ಅಭ್ಯಾಸ ನಡೆಸುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯವಾಗಿ ಆಟಗಾರರು ಯಾವುದೇ ಉಪಕರಣ ಬಳಸದೆ, ನೇರವಾಗಿ ಮೈದಾನಕ್ಕೆ ಹಾರುವ ಮೂಲಕ ಕ್ಯಾಚ್‌ ಅಭ್ಯಾಸ ನಡೆಸುತ್ತಾರೆ. ಆದರೆ ಇಮಾಮ್‌ ಉಲ್‌ ಹಕ್‌ ಸೇರಿದಂತೆ ಪಾಕ್‌ ತಂಡದ ಕೆಲ ಆಟಗಾರರು ಬೆಡ್‌ ಬಳಸಿದ್ದಾರೆ. ‘ಆಟಗಾರರಿಗೆ ಬೆಡ್‌ ಮಾತ್ರವಲ್ಲ. ಬೆಡ್‌ಶೀಟ್‌ಗಳನ್ನೂ ಕೊಟ್ಟುಬಿಡಿ’ ಎಂದು ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾರ್ದಿಕ್‌ ಪಾಂಡ್ಯ ಟಿ20ಯಲ್ಲಿ ವಿಶ್ವ ನಂ.1 ಆಲ್ರೌಂಡರ್‌

ದುಬೈ: ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ಹಾರ್ದಿಕ್‌ ಪಾಂಡ್ಯ, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಜಂಟಿ ನಂಬರ್‌ 1 ಸ್ಥಾನಕ್ಕೇರಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.ಐಪಿಎಲ್‌ ವೇಳೆ ತಮ್ಮ ನಾಯಕತ್ವ, ಪ್ರದರ್ಶನದಿಂದಾಗಿ ಭಾರಿ ಟೀಕೆಗೊಳಗಾಗಿದ್ದ 30ರ ಹಾರ್ದಿಕ್‌, ಭಾರತದ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 2 ಸ್ಥಾನ ಪ್ರಗತಿ ಸಾಧಿಸಿ, ಶ್ರೀಲಂಕಾದ ಹಸರಂಗ ಜೊತೆ ಜಂಟಿ ನಂ.1 ಸ್ಥಾನದಲ್ಲಿದ್ದಾರೆ. ಅಕ್ಷರ್‌ ಪಟೇಲ್‌ 7 ಸ್ಥಾನ ಮೇಲಕ್ಕೇರಿ 12ನೇ ಸ್ಥಾನಕ್ಕೇರಿದ್ದಾರೆ.

ಇನ್ನು, ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ 12 ಸ್ಥಾನ ಜಿಗಿತ ಕಂಡು 12ನೇ ಸ್ಥಾನಕ್ಕೇರಿದ್ದಾರೆ. ಅಕ್ಷರ್‌ ಪಟೇಲ್‌ 7ನೇ, ಕುಲ್ದೀಪ್‌ ಜಂಟಿ 8ನೇ ಸ್ಥಾನಗಳಲ್ಲಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್‌ ಯಾದವ್‌ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.