ಸಾರಾಂಶ
2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡಲಿದೆ 40 ಟಿ20 ಪಂದ್ಯ. ಜಿಂಬಾಬ್ವೆ ವಿರುದ್ಧದ ಸರಣಿಯಿಂದಲೇ ಸಿದ್ಧತೆ ಆರಂಭ. ಹಿರಿಯ ನಿವೃತ್ತಿಯಿಂದಾಗಿ ಹೊಸ ತಂಡ ಕಟ್ಟುವ ಸವಾಲು.
ನವದೆಹಲಿ: 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಇದೇ ವಾರದಿಂದ 2026ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲಿದೆ. ಹಿರಿಯ ಆಟಗಾರರಾದ ರೋಹಿತ್, ಕೊಹ್ಲಿ, ಜಡೇಜಾ ನಿವೃತ್ತಿಯಿಂದಾಗಿ, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ಹೊಸ ತಂಡ ಕಟ್ಟುವ ಸವಾಲು ಎದುರಾಗಿದ್ದು, ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಿದ್ಧಗೊಳಿಸುವ ಕೆಲಸ ಆಗಬೇಕಿದೆ.
2023-2027ರ ಐಸಿಸಿ ಭವಿಷ್ಯದ ವೇಳಾಪಟ್ಟಿಯ ಪ್ರಕಾರ, 2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ತಂಡ 34 ಟಿ20 ಪಂದ್ಯ ನಿಗದಿಯಾಗಿದೆ. ಇದರ ಜೊತೆಗೆ ಸಮಯಾವಕಾಶ ನೋಡಿಕೊಂಡು ಮತ್ತಷ್ಟು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐಗೆ ಅವಕಾಶ ಇರಲಿದೆ. ಹೀಗಾಗಿ, ಮುಂದಿನ ವಿಶ್ವಕಪ್ ಸಿದ್ಧತೆಗೆ ಭಾರತ ತಂಡಕ್ಕೆ ಕನಿಷ್ಠ 40 ಪಂದ್ಯಗಳು ಸಿಗುವ ನಿರೀಕ್ಷೆ ಇದೆ.2024-26ರ ವರೆಗಿನ ವೇಳಾಪಟ್ಟಿ (ಟಿ20)
* ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಸರಣಿ (ತವರಿನಾಚೆ) - ಜುಲೈ 2024* ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿ (ತವರಿನಾಚೆ) - ಜುಲೈ 2024* ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಸರಣಿ (ತವರಿನಲ್ಲಿ)- ಸೆಪ್ಟೆಂಬರ್ 2024* ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ಜನವರಿ-ಫೆಬ್ರವರಿ 2025
* ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಸರಣಿ (ತವರಿನಾಚೆ) - ಆಗಸ್ಟ್ 2025* ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿ (ತವರಿನಾಚೆ) - ಅಕ್ಟೋಬರ್ 2025* ದ.ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ನವೆಂಬರ್ 2025* ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ಜನವರಿ 2026