ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ರ ಅವಧಿ ಟಿ20 ವಿಶ್ವಕಪ್‌ಗೆ ಅಂತ್ಯವಾಗಲಿದೆ. ಹೊಸ್‌ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ದುಬೈ: ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ನಡುವೆಯೇ ಈ ಬಗ್ಗೆ ಗೌತಮ್ ಗಂಭೀರ್‌ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು, ಭಾರತ ತಂಡಕ್ಕೆ ಕೋಚ್‌ ಆಗಲು ಇಷ್ಟಪಡುತ್ತೇನೆ ಎಂದಿದ್ದಾರೆ.

 ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ರ ಅವಧಿ ಟಿ20 ವಿಶ್ವಕಪ್‌ಗೆ ಅಂತ್ಯವಾಗಲಿದೆ. ಹೊಸ್‌ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. 

ಈ ನಡುವೆ ಇದರ ಬಗ್ಗೆ ಅಬುಧಾಬಿಯಲ್ಲಿ ಮಾತನಾಡಿದ ಗಂಭೀರ್‌, ‘ಕೋಚ್‌ ಆಗುತ್ತೇನೆಂಬ ವರದಿಗಳಿಗೆ ನಾನು ಉತ್ತರಿಸಲ್ಲ. ಆದರೆ ಭಾರತ ತಂಡದ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ಕೋಚ್‌ ಆಗಿ 140 ಕೋಟಿ ಜನ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆ’ ಎಂದು ಹೇಳಿದ್ದಾರೆ.ಗಂಭೀರ್‌ 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದರು. ಇತ್ತೀಚೆಗೆ ಗಂಭೀರ್‌ ಮಾರ್ಗದರ್ಶನದಲ್ಲೇ ಕೆಕೆಆರ್‌ ತಂಡ ಐಪಿಎಲ್‌ ಚಾಂಪಿಯನ್‌ ಆಗಿತ್ತು.

ದಾಂಪತ್ಯಕ್ಕೆ ಕಾಲಿರಿಸಿದ ಕ್ರಿಕೆಟಿಗ ವೆಂಕಿ ಅಯ್ಯರ್‌

ಭಾರತದ ಯುವ ಕ್ರಿಕೆಟಿಗ, ಐಪಿಎಲ್‌ ಟ್ರೋಫಿ ವಿಜೇತ ಕೆಕೆಆರ್‌ ತಂಡದ ಪ್ರಮುಖ ಆಟಗಾರ ವೆಂಕಟೇಶ್‌ ಅಯ್ಯರ್ ಭಾನುವಾರ ಶೃತಿ ರಘುನಾಥನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.