ನನ್ನ ಪತ್ನಿ ಅವನಲ್ಲ, ಅವಳು: ಇಡೀ ಜಗತ್ತಿಗೆ ಸಾರಲು ಮುಂದಾದ ಫ್ರಾನ್ಸ್‌ ಅಧ್ಯಕ್ಷ!

| Published : Sep 20 2025, 01:03 AM IST

ನನ್ನ ಪತ್ನಿ ಅವನಲ್ಲ, ಅವಳು: ಇಡೀ ಜಗತ್ತಿಗೆ ಸಾರಲು ಮುಂದಾದ ಫ್ರಾನ್ಸ್‌ ಅಧ್ಯಕ್ಷ!
Share this Article
  • FB
  • TW
  • Linkdin
  • Email

ಸಾರಾಂಶ

ಟ್ರಂಪ್‌ ಸಾರಿರುವ ತೆರಿಗೆ ಯುದ್ಧ ಎದುರಿಸುವುದು ಹೇಗೆ? ರಷ್ಯಾ- ಉಕ್ರೇನ್‌ ಸಮರ ನಿಲ್ಲಿಸುವುದಕ್ಕೆ ಏನು ಮಾಡಬೇಕು? ಎಂಬುದು ಸೇರಿ ಹಲವು ವಿಚಾರಗಳ ಬಗ್ಗೆ ವಿಶ್ವ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಆದರೆ ಫ್ರಾನ್ಸ್‌ ಅಧ್ಯಕ್ಷರಿಗೆ ಇದರ ಜತೆಗೆ ಮತ್ತೊಂದು ಸವಾಲು ಎದುರಾಗಿದೆ.

- ಅಮೆರಿಕ ಕೋರ್ಟಿಗೆ ದಾಖಲೆ ಸಲ್ಲಿಸಲು ನಿರ್ಧಾರ- ವಿಶ್ಲೇಷಕನ ಆರೋಪದಿಂದ ರಾದ್ಧಾಂತ

---

ಏನಿದು ವಿವಾದ?- ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ (47) ಪತ್ನಿ ಬ್ರಿಜಟ್‌ (72) ಮಹಿಳೆಯೇ ಅಲ್ಲ ಎಂದ ರಾಜಕೀಯ ವಿಶ್ಲೇಷಕ- ಬ್ರಿಜಟ್‌ ಸೋದರನೇ ಲಿಂಗ ಬದಲಿಸಿಕೊಂಡು ಫ್ರಾನ್ಸ್ ಅಧ್ಯಕ್ಷರ ಪತ್ನಿಯಾಗಿದ್ದಾನೆ ಎಂದು ಬಾಂಬ್‌- ಕೇಸ್‌ ದಾಖಲಿಸಿದರೂ ಆರೋಪ ನಿಲ್ಲಿಸದ ಕ್ಯಾನ್‌ಡೇಸ್‌ ಓನ್ಸ್‌. ಮತ್ತೆ ಕಾನೂನು ಹೋರಾಟ- ಬ್ರಿಜಟ್‌ ನಿಜಕ್ಕೂ ಮಹಿಳೆ ಎಂದು ಕೋರ್ಟಿಗೆ ದಾಖಲೆ ಸಲ್ಲಿಸಲು ಹೊರಟ ಅಧ್ಯಕ್ಷ ಮ್ಯಾಕ್ರಾನ್‌

---

ಪ್ಯಾರಿಸ್‌: ಟ್ರಂಪ್‌ ಸಾರಿರುವ ತೆರಿಗೆ ಯುದ್ಧ ಎದುರಿಸುವುದು ಹೇಗೆ? ರಷ್ಯಾ- ಉಕ್ರೇನ್‌ ಸಮರ ನಿಲ್ಲಿಸುವುದಕ್ಕೆ ಏನು ಮಾಡಬೇಕು? ಎಂಬುದು ಸೇರಿ ಹಲವು ವಿಚಾರಗಳ ಬಗ್ಗೆ ವಿಶ್ವ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ಆದರೆ ಫ್ರಾನ್ಸ್‌ ಅಧ್ಯಕ್ಷರಿಗೆ ಇದರ ಜತೆಗೆ ಮತ್ತೊಂದು ಸವಾಲು ಎದುರಾಗಿದೆ. ಅದೇನೆಂದರೆ, ತಮ್ಮ ಪತ್ನಿ ತೃತೀಯ ಲಿಂಗಿ ಅಲ್ಲ. ಆಕೆ ನಿಜಕ್ಕೂ ಮಹಿಳೆ ಎಂದು ಇಡೀ ವಿಶ್ವಕ್ಕೇ ನಿರೂಪಿಸುವುದು. ಅದೂ ತಮ್ಮ ಪತ್ನಿಯ 72ನೇ ವಯಸ್ಸಿನಲ್ಲಿ!

ತಮ್ಮ ಪತ್ನಿ ಬ್ರಿಜಟ್‌ ತೃತೀಯಲಿಂಗಿ ಎಂಬ ರಾಜಕೀಯ ವಿಶ್ಲೇಷಕ ಕ್ಯಾನ್‌ಡೇಸ್‌ ಓನ್ಸ್‌ ಆರೋಪಕ್ಕೆ ತಿರುಗೇಟು ನೀಡುವ ಸಲುವಾಗಿ ತಮ್ಮ ಪತ್ನಿ ನಿಜಕ್ಕೂ ಮಹಿಳೆ ಎಂದು ವೈಜ್ಞಾನಿಕ ಮತ್ತು ಫೋಟೋ ದಾಖಲೆಗಳನ್ನು ಸಲ್ಲಿಸಲು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರಾನ್‌ (47) ನಿರ್ಧರಿಸಿದ್ದಾರೆ. ಈ ಕುರಿತು ಅವರ ವಕೀಲರು ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ.

ಬ್ರಿಜಟ್‌ ತೃತೀಯ ಲಿಂಗಿ ಎಂದು 2017ರಲ್ಲೇ ಬ್ಲಾಗರ್‌ ಒಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಮ್ಯಾಕ್ರಾನ್ ಮತ್ತು ಬ್ರಿಜಟ್‌ ಇಬ್ಬರೂ ಕೇಸು ದಾಖಲಿಸಿ ಅದರಲ್ಲಿ ಗೆಲುವು ಸಾಧಿಸಿದ್ದರು.

ಆದರೂ ಓನ್ಸ್‌ ತಮ್ಮ ಆರೋಪ ಮುಂದುವರಿಸಿದರು. ಬ್ರಿಜಟ್‌ ನಿಜವಾಗಿಯೂ ಬ್ರಿಜಟ್‌ ಅಲ್ಲ. ಬ್ರಿಜಟ್‌ ಹೆಸರಿನಲ್ಲಿ ಆಕೆಯ ಸೋದರ ಫ್ರಾನ್ಸ್‌ ಅಧ್ಯಕ್ಷರ ಪತ್ನಿಯಾಗಿದ್ದಾನೆ. ಆತನ ಹೆಸರು ಜೀನ್‌ ಮೈಕೆಲ್‌. ಲಿಂಗ ಬದಲಿಸಿಕೊಂಡು ಮ್ಯಾಕ್ರಾನ್‌ ಅವರನ್ನು ವರಿಸಿದ್ದಾನೆ ಎಂದು ಬಾಂಬ್‌ ಸಿಡಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮ್ಯಾಕ್ರಾನ್‌ ಮತ್ತು ಬ್ರಿಜಟ್‌ ಕಳೆದ ಜುಲೈನಲ್ಲಿ ಮತ್ತೊಮ್ಮೆ ಅಮೆರಿಕದ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ವೇಳೆ ಸಾಕ್ಷಿಯಾಗಿ ತಮ್ಮ ಪತ್ನಿ ಮಹಿಳೆ ಎಂದು ಸಾಬೀತುಪಡಿಸುವ ಫೋಟೋ ಮತ್ತು ವೈಜ್ಞಾನಿಕ ದಾಖಲೆ ಸಲ್ಲಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ತಮ್ಮ ಪತ್ನಿ ಗರ್ಭಿಣಿಯಾಗಿದ್ದ ಮತ್ತು ಮಕ್ಕಳನ್ನು ಸಾಕುವ ಫೋಟೋಗಳನ್ನು ಕೂಡಾ ಹಂಚಿಕೊಳ್ಳಲಿದ್ದಾರೆ ಎಂದು ಅವರ ಪರ ವಕೀಲ ಟಾಮ್‌ ಕ್ಲಾರ್‌ ತಿಳಿಸಿದ್ದಾರೆ.

ವಿಶೇಷವೆಂದರೆ ಬ್ರಿಜಟ್‌ ಅವರು ಮ್ಯಾಕ್ರಾನ್‌ಗೆ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಆಗಲೇ ತುಂಟನಾಗಿದ್ದ ಮ್ಯಾಕ್ರಾನ್‌ ಮುಂದೊಂದು ದಿನ ನಿಮ್ಮನ್ನು ಮದುವೆಯಾಗಿಯೇ ತೀರುತ್ತೇನೆ ಎಂದು ಅವರ ಬಳಿಯೇ ಹೇಳಿದ್ದರಂತೆ. ಆ ವೇಳೆ ಬ್ರಿಜಟ್‌ ಅವರಿಗೆ ಮದುವೆಯಾಗಿ ಮೂರು ಮಕ್ಕಳು ಸಹ ಇದ್ದರು. ನಂತರ ಮ್ಯಾಕ್ರೋನ್‌ ಫ್ರಾನ್ಸ್‌ ಅಧ್ಯಕ್ಷರಾದ ಬಳಿಕ ಬ್ರಿಜಟ್‌ ತಮ್ಮ ಮೊದಲ ಪತಿಗೆ ಡೈವೋರ್ಸ್‌ ನೀಡಿ 2007ರಲ್ಲಿ ಮ್ಯಾಕ್ರಾನ್‌ರನ್ನು ಮದುವೆಯಾಗಿದ್ದರು. ಇಬ್ಬರ ನಡುವೆ 24 ವರ್ಷಗಳಷ್ಟು ಅಂತರವಿದೆ.

ಹಲ್ಲೆ ವಿವಾದ:

ಇತ್ತೀಚೆಗೆ ಮ್ಯಾಕ್ರಾನ್‌ ಮತ್ತು ಬ್ರಿಜಟ್‌ ವಿಯೆಟ್ನಾಂಗೆ ಭೇಟಿ ನೀಡಿದ್ದ ವೇಳೆ ವಿಮಾನದೊಳಗೆ ಬ್ರಿಜಟ್‌ ಮ್ಯಾಕ್ರಾನ್‌ರನ್ನು ತಳ್ಳಾಡಿದ್ದರು ಎನ್ನಲಾದ ಆರೋಪದ ವಿಡಿಯೋವೊಂದು ಭಾರೀ ವೈರಲ್‌ ಆಗಿತ್ತು.