ಸಾರಾಂಶ
ಭಾರಿ ವಿರೋಧ, ಬಾಯ್ಕಾಟ್ ಕರೆಯ ನಡುವೆಯೂ ಸಾಂಪ್ರದಾಯಿಕ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾನುವಾರ ರಾತ್ರಿ ದುಬೈನಲ್ಲಿ ಮುಖಾಮುಖಿಯಾದವು.
ದುಬೈ : ಭಾರಿ ವಿರೋಧ, ಬಾಯ್ಕಾಟ್ ಕರೆಯ ನಡುವೆಯೂ ಸಾಂಪ್ರದಾಯಿಕ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾನುವಾರ ರಾತ್ರಿ ದುಬೈನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಭಾರತ ಬಗ್ಗುಬಡಿಯಿತು.
ಅದಕ್ಕೂ ಮಿಗಿಲಾಗಿ ಉಗ್ರವಾದ ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವಲ್ಲಿಯೂ ಯಶಸ್ವಿಯಾಯಿತು. ಬಹುಮಾನ ವಿತರಣೆ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ‘ಗೆಲುವನ್ನು ಪಹಲ್ಗಾಂ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ’ ಎನ್ನುವ ಮೂಲಕ ಪಾಕಿಸ್ತಾನಿಗಳಿಗೆ ಛಡಿ ಏಟು ಕೊಟ್ಟರು.
ಪಾಕ್ 127/9
ಭಾರತ 131/3 (15.5 ಓವರ್‌ಗಳಲ್ಲಿ)
ಪಾಕ್ ‘ಪಂಚ್’ರ್
1. ಟಾಸ್ ವೇಳೆ ಹ್ಯಾಂಡ್‌ಶೇಕ್ ಮಾಡಲಾಗುತ್ತದೆ. ಭಾರತ ನಾಯಕ ಸೂರ್ಯಕುಮಾರ್ ಅವರು ಹ್ಯಾಂಡ್‌ಶೇಕ್ ಇರಲಿ, ಪಾಕ್ ನಾಯಕನನ್ನು ತಿರುಗಿಯೂ ನೋಡಲಿಲ್ಲ
2. ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಯಾವ ಹಂತದಲ್ಲೂ ಮಾತನಾಡಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ
3. ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು
4. ಬಹುಮಾನ ವಿತರಣೆ ವೇಳೆ ಪಾಕಿಸ್ತಾನ ಪರ ಪ್ರಾಯೋಜಕರಿಗೆ ಹ್ಯಾಂಡ್‌ಶೇಕ್ ಮಾಡಲು ಭಾರತ ಆಟಗಾರರು ಹತ್ತಿರವೂ ಸುಳಿಯಲಿಲ್ಲ
5. ಪಂದ್ಯ ನಂತರ ನಡೆದ ಬಹುಮಾನ ವಿತರಣೆ ವೇಳೆ ಗೆಲುವನ್ನು ಸೂರ್ಯಕುಮಾರ್ ಅವರು ಪಹಲ್ಗಾಂ ಸಂತ್ರಸ್ತರು ಹಾಗೂ ಸೇನಾ ಪಡೆಗಳಿಗೆ ಅರ್ಪಿಸಿ ಪಾಕಿಸ್ತಾನಿಗಳಿಗೆ ಬಿಸಿ ಮುಟ್ಟಿಸಿದರು