ಜಪಾನ್‌ನಲ್ಲಿ 2 ವಿಮಾನಗಳ ಡಿಕ್ಕಿ: 289 ಪ್ರಯಾಣಿಕರು ಸೇಫ್‌

| Published : Jan 17 2024, 01:47 AM IST / Updated: Jan 17 2024, 09:19 AM IST

ಸಾರಾಂಶ

ಜಪಾನ್‌ನ ಹನೆಡಾ ವಿಮಾನ ನಿಲ್ದಾಣದಲ್ಲಿ ಉಂಟಾದ ಅವಗಢದಿಂದ ದೇಶ ಚೇತರಿಸಿಕೊಳ್ಳುವ ಮುನ್ನವೇ ನವ ಚಿತೋಸ್‌ ವಿಮಾನ ನಿಲ್ದಾಣದಲ್ಲಿ ಕೊರಿಯನ್‌ ಏರ್‌ ವಿಮಾನವೊಂದು ಕ್ಯಾಥೆ ಪೆಸಿಫಿಕ್‌ ಕಂಪನಿಗೆ ಸೇರಿದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.

ಟೋಕಿಯೋ(ಜಪಾನ್‌): ಜಪಾನ್‌ನ ಹನೆಡಾ ವಿಮಾನ ನಿಲ್ದಾಣದಲ್ಲಿ ಉಂಟಾದ ಅವಗಢದಿಂದ ದೇಶ ಚೇತರಿಸಿಕೊಳ್ಳುವ ಮುನ್ನವೇ ನವ ಚಿತೋಸ್‌ ವಿಮಾನ ನಿಲ್ದಾಣದಲ್ಲಿ ಕೊರಿಯನ್‌ ಏರ್‌ ವಿಮಾನವೊಂದು ಕ್ಯಾಥೆ ಪೆಸಿಫಿಕ್‌ ಕಂಪನಿಗೆ ಸೇರಿದ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ಕೊರಿಯನ್‌ ವಿಮಾನದಲ್ಲಿದ್ದ ಎಲ್ಲ 276 ಪ್ರಯಾಣಿಕರು ಮತ್ತು 13 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. 

ಪ್ರಯಾಣಿಕರನ್ನು ಹತ್ತಿಸಿಕೊಂಡು ಆಗಷ್ಟೇ ರನ್‌ವೇ ಕಡೆಗೆ ಹೊರಟಿದ್ದ ಕೊರಿಯನ್‌ ವಿಮಾನವು ಸ್ವಲ್ಪ ದೂರದಲ್ಲಿ ನಿಂತಿದ್ದ ಖಾಲಿ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾರಿಗೂ ಸಹ ಗಾಯವಾಗಿಲ್ಲ. 

ಘಟನೆಯಿಂದ ಉಂಟಾಗಿರುವ ನಷ್ಟ ಮತ್ತು ಘಟನೆಗೆ ಕಾರಣದ ಕುರಿತು ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. 2 ವಾರಗಳ ಹಿಂದಷ್ಟೇ ಟೊಕ್ಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ನೌಕಾಪಡೆ ಮತ್ತು ನಾಗರಿಕ ವಿಮಾನದ ನಡುವೆ ಡಿಕ್ಕಿಯಾದ ಪರಿಣಾಮ ಬೆಂಕಿ ಅವಗಢ ಸಂಭವಿಸಿ ಆರು ಸಿಬ್ಬಂದಿ ಸಾವನ್ನಪ್ಪಿದ್ದರು.