ಸಾರಾಂಶ
ಒಟ್ಟಾವಾ: ಸ್ವಾಮಿ ನಾರಾಯಣ ಮಂದಿರದ ಮೇಲಿನ ದಾಳಿ, ಖಲಿಸ್ತಾನಿಗಳ ಹಿಂಸಾಚಾರವನ್ನು ಖಂಡಿಸಿದ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯಗೆ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಎಚ್ಚರಿಕೆ ನೀಡಿದ್ದಾನೆ. ನೀವು ಮತ್ತು ನಿಮ್ಮ ಹಿಂದೂಗಳು ಕೆನಡಾ ಬಿಟ್ಟು ತವರಿಗೆ ತೆರಳುವುದು ಸೂಕ್ತ ಎಂದು ಆತ ಎಚ್ಚರಿಕೆ ರೂಪದಲ್ಲಿ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ಯ, ‘ಪ್ರಪಂಚದ ಬೇರೆ ಬೇರೆ ಭಾಗದಲ್ಲಿರುವ ಹಿಂದೂಗಳು ಸುಂದರ ಕೆನಡಾಗೆ ಬಂದಿದ್ದೇವೆ. ಕೆನಡಾ ನಮ್ಮ ಭೂಮಿಯಾಗಿದೆ. ಕೆನಡಾದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ನಾವು ಧನಾತ್ಮಕ ಕೊಡುಗೆಯನ್ನು ನೀಡಿದ್ದೇವೆ. ಅದನ್ನು ಮುಂದುವರೆಸುತ್ತೇವೆ’ ಎಂದಿದ್ದಾರೆ.
ಸೋಲಿಸಿದವರ ಮೇಲೆ ಸೇಡು ಬೇಡ: ಮೋದಿಗೆ ಸ್ಟಾಲಿನ್ ಕಿಡಿ
ಚೆನ್ನೈ: ಮಂಗಳವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿನ ಹೆಸರನ್ನು ಪ್ರಸ್ತಾಪಿಸದ ಕಾರಣ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಎಮ್.ಕೆ.ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದವರ ಮೇಲೆ ಈ ಮೂಲಕ ಸೇಡು ತೀರಿಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಆಡಳಿತಾರೂಢ ಬಿಜೆಪಿಯ ಕಾಲೆಳೆದಿದ್ದಾರೆ. ‘ಚುನಾವಣೆ ಮುಕ್ತಾಯವಾಗಿರುವ ಕಾರಣ ದೇಶದ ಅಭಿವೃದ್ಧಿಯ ಕಡೆ ಗಮನ ಹರಿಸಿ’ ಎಂಬ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಮೊನ್ನೆ ಮಂಡಿಸಲಾದ ಬಜೆಟ್ ದೇಶವನ್ನು ರಕ್ಷಿಸುವ ಬದಲು ನಿಮ್ಮ ಸರ್ಕಾರವನ್ನು ರಕ್ಷಿಸಿಕೊಳ್ಳುವಂತಿದೆ ಎಂದು ಕಿಡಿ ಕಾರಿದ್ದಾರೆ. ಜೊತೆಗೆ ನಿಮ್ಮ ಇಷ್ಟ-ಕಷ್ಟಗಳಿಗನುಸಾರವಾಗಿ ಸರ್ಕಾರ ನಡೆಸಿದರೆ ಕ್ರಮೇಣ ಒಬ್ಬಂಟಿಯಾಗಿಬಿಡುತ್ತೀರಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.