ಸಾರಾಂಶ
ವಿಶ್ವಸಂಸ್ಥೆ: 2023ರಲ್ಲಿ ವಿಶ್ವದಲ್ಲಿ 4 ಕೋಟಿ ಜನರಲ್ಲಿ ಏಡ್ಸ್ ರೋಗ ಕಾಣಿಸಿಕೊಂಡಿದ್ದು, ಈ ಪೈಕಿ 9 ಕೋಟಿಯಷ್ಟು ಜನರು ಯಾವುದೇ ಚಿಕಿತ್ಸೆಗಳನ್ನು ಪಡೆದುಕೊಂಡಿಲ್ಲ. ಪರಿಣಾಮ, ಪ್ರತಿ ನಿಮಿಷಕ್ಕೆ ಏಡ್ಸ್‌ಗೆ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
ಏಡ್ಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಉತ್ತರ ಆಫ್ರಿಕಾ,ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾ , ಲ್ಯಾಟಿನ್ ಅಮೆರಿಕದಲ್ಲಿ ಹೊಸ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ ಎಂದು ವರದಿ ಹೇಳಿದೆ.
ವರದಿ ಪ್ರಕಾರ, ವಿಶ್ವದಲ್ಲಿ 6.30 ಲಕ್ಷ ಜನರು ಏಡ್ಸ್ ಸಂಬಂಧಿತ ರೋಗದಿಂದ ಸಾವನ್ನಪ್ಪಿದ್ದಾರೆ. 2004ರಿಂದ ಏಡ್ಸ್ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಆದರೆ ಕಳೆದ ವರ್ಷ ಏರಿಕೆಯಾಗಿದ್ದು, ಪ್ರಪಂಚದಾದ್ಯಂತ 3.9 ಕೋಟಿ ಜನರು ಹೆಚ್‌ಐವಿ ಸೋಂಕಿತರಾಗಿದ್ದಾರೆ. ಇದರ ಪರಿಣಾಮ ಶೇ.86ರಷ್ಟು ಜನರು ಎದುರಿಸಿದ್ದಾರೆ. ಶೇ.77ರಷ್ಟು ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶೇ. 72ರಷ್ಟು ಜನರು ಗುಣಮುಖರಾಗಿದ್ದಾರೆ ಎಂದು ನ್ಯೂಯಾರ್ಕ್‌ನ ಏಡ್ಸ್ ಕುರಿತ ವಿಶ್ವಸಂಸ್ಥೆಯ ಜಂಟಿ ಕಾರ್ಯಕ್ರಮ(ಯುಎನ್‌ಏಡ್ಸ್) ನಿರ್ದೇಶಕ ಸೀಸರ್ ನುನೆಜ್ ಹೇಳಿದ್ದಾರೆ.