ಲಾರಿದು ಹರಿದು ಮಹಿಳೆ, ಬಾಲಕ ಸಾವು

KannadaprabhaNewsNetwork |  
Published : Dec 14, 2023, 01:30 AM IST
13ಜಿಯುಡಿ1 | Kannada Prabha

ಸಾರಾಂಶ

ಲಾರಿದು ಹರಿದು ಮಹಿಳೆ, ಬಾಲಕ ಸಾವುಅಪಘಾತಕ್ಕೆ ಕುರಿಗಾಯಿ ಮಹಿಳೆ, ಬೈಕ್‌ ಸವಾರ ಬಲಿ

ಅಪಘಾತಕ್ಕೆ ಕುರಿಗಾಯಿ ಮಹಿಳೆ, ಬೈಕ್‌ ಸವಾರ ಬಲಿ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಬೈಕ್ ನಲ್ಲಿದ್ದ ಯುವಕ ಹಾಗೂ ಕುರಿಗಾಹಿ ಮಹಿಳೆಯ ಮೇಲೆ ಲಾರಿ ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಡಿಬಂಡೆ ಹೊರವಲಯದ ಗೌರಬಿದನೂರು ತಾಲೂಕಿನ ಚಿಮಕಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಗುಡಿಬಂಡೆ ಗೌರಿಬಿದನೂರು ಮಾರ್ಗದ ಚಿಮಕಲಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಕುರಿಗಾಹಿ ತುಳಸಿಭಾಯಿ (50) ಮತ್ತು ಬೈಕ್ ನಲ್ಲಿದ್ದ ನಂದೀಶ್ ನಾಯಕ್ (16) ಎಂದು ಗುರ್ತಿಸಲಾಗಿದೆ.

ನಿಯಂತ್ರಣ ತಪ್ಪಿದ ಲಾರಿ

ರಸ್ತೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಸ್ಕೂಟಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿ ಕುರಿ ಮೇಯಿಸುತ್ತಿದ್ದ ಮಹಿಳೆಗೂ ಸಹ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಗೊಂಡ ಬೈಕ್ ಸವಾರರನ್ನು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.

ರಸ್ತೆಯಲ್ಲಿ ಕುಳಿತು ಪ್ರತಿಭಟನೆ

ಭೀಕರ ರಸ್ತೆ ಅಪಘಾತದಲ್ಲಿ ತಾಂಡಾ ಗ್ರಾಮದ ನಿವಾಸಿಗಳಿಬ್ಬರು ಮೃತಪಟ್ಟ ಸುದ್ಧಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಂಬಂಧಿಕರು ಹಾಗೂ ನೂರಾರು ಗ್ರಾಮಸ್ಥರು ಏಕಾಏಕಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಪದೇ ಪದೇ ಈ ಭಾಗದಲ್ಲಿ ಅಪಘಾತಗಳಾಗುತ್ತಿದ್ದರೂ ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ, ಇದರಿಂದ ಅಮಾಯಕರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.

ಗುಡಿಬಂಡೆ ಹಾಗೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಾನಿರತರರ ಮನವೋಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.13ಜಿಯುಡಿ1: ತುಳಸಿಭಾಯಿ

13ಜಿಯುಡಿ2: ನಂದೀಶ್ ನಾಯಕ್

13ಜಿಯುಡಿ3: ಸ್ಥಳೀಯರ ಪ್ರತಿಭಟನೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ
ಕುಡಿದು ಕಾರ್‌ ಓಡಿಸಿ ಅಪಘಾತ : ಮಯೂರ್ ವಿರುದ್ಧ ಕೇಸ್‌