ಆಸ್ತಿಯಲ್ಲಿ ಭಾಗ ಕೊಡಲಿಲ್ಲವೆಂದು ಅತ್ತೆ-ಮಾವನನ್ನ ಕೊಲೆ

KannadaprabhaNewsNetwork |  
Published : Dec 14, 2023, 01:30 AM IST
ಫೋಟೋ: 13 ಹೆಚ್‌ಎಸ್‌ಕೆ 3, 4, 5, 63: ಹೊಸಕೋಟೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪಿಐ ರವಿ ಸುದ್ದಿಘೋಷ್ಠಿ ನಡೆಸಿ ಕೊಲೆ ಪ್ರಕರಣದ ಮಾಹಿತಿ ತಿಳಿಸಿದರು. | Kannada Prabha

ಸಾರಾಂಶ

ತಾಲೂಕಿನ ಸೂಲಿಬೆಲೆಯ ವಾಲ್ಮಿಕಿ ನಗರದಲ್ಲಿ ಡಿ.9ರಂದು ನಡೆದ ವೃದ್ದ ದಂಪತಿಗಳ ಕೊಲೆ ಪ್ರಕರಣಕ್ಕೆ ಸಾಕಷ್ಟು ಕುತೂಹಲ ನೀಡಿದ್ದ ಬೆನ್ನಲ್ಲೆ ಆಸ್ತಿ ಭಾಗ ಕೊಡಲಿಲ್ಲವೆಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ವಾಲ್ಮೀಕಿ ನಗರದ ನಿವಾಸಿಗಳಾದ ರಾಮಕೃಷ್ಣಪ್ಪ(70), ಮುನಿರಾಮಕ್ಕ(65) ಸಾವನ್ನಪ್ಪಿದ್ದರು. ಮೃತರ ಮಗಳು ಶಕುಂತಲಾ ನೀಡಿದ ದೂರಿನ ಮೇರೆಗೆ ಮಗ, ಸೊಸೆಯನ್ನು ಸೂಲಿಬೆಲೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆಸ್ತಿಯಲ್ಲಿ ಭಾಗ ಕೊಡುತ್ತಿಲ್ಲವೆಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸೊಸೆ ಮೊಮ್ಮಕ್ಕಳಿಂದ ಕೊಲೆ । ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ । ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ಸೂಲಿಬೆಲೆಯ ವಾಲ್ಮಿಕಿ ನಗರದಲ್ಲಿ ಡಿ.9ರಂದು ನಡೆದ ವೃದ್ದ ದಂಪತಿಗಳ ಕೊಲೆ ಪ್ರಕರಣಕ್ಕೆ ಸಾಕಷ್ಟು ಕುತೂಹಲ ನೀಡಿದ್ದ ಬೆನ್ನಲ್ಲೆ ಆಸ್ತಿ ಭಾಗ ಕೊಡಲಿಲ್ಲವೆಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ವಾಲ್ಮೀಕಿ ನಗರದ ನಿವಾಸಿಗಳಾದ ರಾಮಕೃಷ್ಣಪ್ಪ(70), ಮುನಿರಾಮಕ್ಕ(65) ಸಾವನ್ನಪ್ಪಿದ್ದರು. ಮೃತರ ಮಗಳು ಶಕುಂತಲಾ ನೀಡಿದ ದೂರಿನ ಮೇರೆಗೆ ಮಗ, ಸೊಸೆಯನ್ನು ಸೂಲಿಬೆಲೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆಸ್ತಿಯಲ್ಲಿ ಭಾಗ ಕೊಡುತ್ತಿಲ್ಲವೆಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮಗನಿಲ್ಲದಾಗ ಕೊಲೆ:

ವೃದ್ಧ ದಂಪತಿಗಳ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನರಸಿಂಹಮೂರ್ತಿಯನ್ನು ಮತ್ತಷ್ಟು ವಿಚಾರಣೆಗೆ ನಡೆಸಿದ್ದಾಗ ಭಯಾನಕ ಸತ್ಯ ಹೊರಗೆ ಬಂದಿದೆ, ಅಸಲಿಗೆ ನರಸಿಂಹಮೂರ್ತಿ ಕೊಲೆ ಮಾಡಿಯೇ ಇರಲಿಲ್ಲ. ಆದರೆ ಕೊಲೆಯನ್ನು ಮಾಡಿದ್ದು ಆತನ ಪತ್ನಿ ಭಾಗ್ಯ, ಮಗಳು ವರ್ಷ ಮತ್ತು ಅಪ್ರಾಪ್ತ ಮಗನಾಗಿದ್ದ. ಟ್ರೆಡಿಂಗ್ ಬ್ಯೂಸಿನೆಸ್ ಮಾಡುತ್ತಿದ್ದ ನರಸಿಂಹಮೂರ್ತಿಗೆ 1 ಕೋಟಿಗೂ ಅಧಿಕ ಸಾಲ ಇತ್ತು, ಸಾಲ ತೀರಿಸಲು ಹೆತ್ತವರ ಬಳಿ ಅಸ್ತಿಪಾಲು ಕೇಳುವಂತೆ ಗಂಡನಿಗೆ ಭಾಗ್ಯ ಹೇಳಿದ್ದು, ನರಸಿಂಹಮೂರ್ತಿ ಹೆತ್ತವರ ಬಳಿ ಅಸ್ತಿ ಕೇಳಿದ್ದಾಗ ಕೊಟ್ಟಿರಲಿಲ್ಲ, ಇದೇ ವೇಳೆ ವೃದ್ಧ ದಂಪತಿ ಹೆಣ್ಣು ಮಕ್ಕಳಿಗೆ ಅಸ್ತಿ ಕೊಡಲು ಮುಂದಾಗಿದ್ದರು, ಇದು ಭಾಗ್ಯಳನ್ನು ಕೆರಳುವಂತೆ ಮಾಡಿತ್ತು.

ಬಾಕ್ಸ್: ವಿಷಯ ತಿಳಿದು ಆತ್ಮಹತ್ಯೆ ಅಥವಾ ಊರು ಬಿಡುವ ನಿರ್ಧಾರ

ಗಂಡ ರಾತ್ರಿ ಮನೆಗೆ ಬಂದಾಗ ಅತ್ತೆ- ಮಾವನನ್ನು ಕೊಲೆ ಮಾಡಿರುವುದಾಗಿ ವಿಚಾರ ತಿಳಿಸಿದಾಗ ಗಂಡ ನರಸಿಂಹಮೂರ್ತಿ ಕೆಲಕಾಲ ಚಿಂತಿಸಿ, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಬೇಕು, ಇಲ್ಲವಾದರೆ ಊರು ಬಿಟ್ಟು ತಲೆಮರೆಸಿಕೊಳ್ಳುವುದ? ಪೊಲೀಸ್ ಠಾಣೆಗೆ ತೆರಳಿ ಶರಣಾಗುವುದಾ? ಎಂಬ ನಿರ್ಧಾರ ಮಾಡುತ್ತಿದ್ದೆ. ಅಷ್ಟರಲ್ಲಿ ಮೃತರ ಹೆಣ್ಣುಮಕ್ಕಳು, ಗ್ರಾಮಸ್ಥರು ಹಾಗೂ ಪೊಲೀಸರೇ ಸ್ಥಳಕ್ಕೆ ಬರುವಂತಾಯಿತು ಎಂದು ವಿಚಾರಣೆ ವೇಳೆ ನರಸಿಂಹಮೂರ್ತಿ ತಿಳಿಸಿದ್ದಾನೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹಮೂರ್ತಿ, ಭಾಗ್ಯ ಮತ್ತು ವರ್ಷಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಅಪ್ರಾಪ್ತ ಬಾಲಕನನ್ನು ಬಾಲ ಮಂದಿರಕ್ಕೆ ನೀಡಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

---

3: ಹೊಸಕೋಟೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪಿಎಸ್ಐ ರವಿ ಸುದ್ದಿಗೋಷ್ಠಿ ನಡೆಸಿ ಕೊಲೆ ಪ್ರಕರಣದ ಮಾಹಿತಿ ನೀಡಿದರು.

4: ಭಾಗ್ಯ

5: ನರಸಿಂಹಮೂರ್ತಿ

6: ವರ್ಷ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ
ಕುಡಿದು ಕಾರ್‌ ಓಡಿಸಿ ಅಪಘಾತ : ಮಯೂರ್ ವಿರುದ್ಧ ಕೇಸ್‌