ಪಾಲಕರನ್ನು ಬ್ಲ್ಯಾಕ್‌ಮೇಲ್‌ ಮಾಡಲು ಬೆತ್ತಲೆ ಫೋಟೋ ತೆಗೆದಿದ್ದ ಯುವತಿ !

KannadaprabhaNewsNetwork |  
Published : Feb 11, 2026, 04:30 AM ISTUpdated : Feb 11, 2026, 10:02 AM IST
Photo

ಸಾರಾಂಶ

ಮಗಳೇ ತಾಯಿಯ ಖಾಸಗಿ ಪೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ರಿಜಿಸ್ಟರ್‌ ಮ್ಯಾರೇಜ್‌ ಆಗಿರುವ ಮಗಳು ಪಾಲಕರಿಗೆ ಬ್ಲ್ಯಾಕ್‌ಮೇಲ್ ಮೇಲ್ ಮಾಡಲು ಖಾಸಗಿ ಪೋಟೋ ತೆಗೆದಿದ್ದಾಳೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

 ಬೆಂಗಳೂರು :  ಮಗಳೇ ತಾಯಿಯ ಖಾಸಗಿ ಪೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ರಿಜಿಸ್ಟರ್‌ ಮ್ಯಾರೇಜ್‌ ಆಗಿರುವ ಮಗಳು ಪಾಲಕರಿಗೆ ಬ್ಲ್ಯಾಕ್‌ಮೇಲ್ ಮೇಲ್ ಮಾಡಲು ಖಾಸಗಿ ಪೋಟೋ ತೆಗೆದಿದ್ದಾಳೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

ಈ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಠಾಣೆ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಪುತ್ರಿಯ ಮತ್ತು ಆಕೆಯ ಪ್ರಿಯಕರನ ಯೋಜನೆ ಬಯಲಾಗಿದೆ.

ತಾನು ಪ್ರೀತಿಸುತ್ತಿದ್ದ ಯುವಕನ ಜತೆ ಮದುವೆಗೆ 23 ವರ್ಷದ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಯುವತಿ ಈ ವಿಚಾರ ಪ್ರಿಯಕರನ ಜತೆಗೆ ಚರ್ಚಿಸಿದ್ದಳು. ಈ ವೇಳೆ ನಿಮ್ಮ ಪಾಲಕರ ಖಾಸಗಿ ಪೋಟೋಗಳನ್ನು ತೆಗೆದಿಟ್ಟುಕೊಂಡಿರು. ಒಂದು ವೇಳೆ ಅವರು ಮದುವೆಗೆ ಒಪ್ಪದೇ ಇದ್ದಾಗ ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡೋಣ ಅಂತ ಪ್ರಿಯಕರ ಸಲಹೆ ನೀಡಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಆಕೆ ಖಾಸಗಿ ಪೋಟೋಗಳನ್ನು ತೆಗೆದಿರುವುದಾಗಿ ಪೊಲೀಸರ ಬಳಿ ಯುವತಿ ಹೇಳಿಕೆ ನೀಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ರಿಜಿಸ್ಟರ್‌ ಮ್ಯಾರೇಜ್‌ ಆಗಿರುವ ಯುವತಿ:

ಪಾಲಕರ ವಿರೋಧದ ನಡುವೆಯೂ 15 ದಿನಗಳ ಹಿಂದೆ ಯುವತಿ ತನ್ನ ಪ್ರಿಯಕರನನ್ನು ರಿಜಿಸ್ಟರ್ ಮದುವೆಯಾಗಿದ್ದಾಳೆ. ಮನೆಯಿಂದ ಹೊರಹೋಗುವ ವೇಳೆ ಯುವತಿ ಮೊಬೈಲ್ ಬಿಟ್ಟು ಹೋಗಿದ್ದಳು. ಪಾಲಕರು ಆಕೆಯ ಮೊಬೈಲ್ ಪರಿಶೀಲಿಸಿದ ವೇಳೆ ಖಾಸಗಿ ಪೋಟೋ ತೆಗೆದಿರುವ ವಿಚಾರ ಬೆಳಕಿಗೆ ಬಂದಿದೆ. ಮದುವೆಗೆ ಪಾಲಕರ ವಿರೋಧವಿದ್ದ ಕಾರಣಕ್ಕೆ ಅವರ ಖಾಸಗಿ ಪೋಟೋ ತೆಗೆದಿದ್ದು, ಅದನ್ನು ಯಾರಿಗೂ ಕಳುಹಿಸಿಲ್ಲ. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಯುವತಿ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.

ಮೊಬೈಲ್‌ ರೀಟ್ರಿವ್ ಮಾಡಲು ರವಾನೆ:

ಸದ್ಯ ಯುವತಿಯ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ಡಿಲೀಟ್‌ ಆಗಿರುವ ಫೋಟೋಗಳನ್ನು ರೀಟ್ರಿವ್‌ ಮಾಡಲು ಮುಂದಾಗಿದ್ದಾರೆ. ಆ ಫೋಟೋಗಳನ್ನು ರೀಟ್ರಿವ್‌ ಆದ ನಂತರ ಯುವತಿ ತೆಗೆದಿದ್ದ ಫೋಟೋಗಳ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಐಪಿಎಲ್‌ ಆಟದ ವೇಳೆ ಮೊಬೈಲ್ ಕಳ್ಳಾಟಕ್ಕೆ ವಿಮಾನದಲ್ಲಿ ಬಂದ್ರು