ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಮೂರು ಬಾರಿ ಉರುಳಿದರೂ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಲಗೂರು ಸಮೀಪದ ಬಾಣಸಮುದ್ರ ಗೇಟ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಹಲಗೂರು:
ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಮೂರು ಬಾರಿ ಉರುಳಿದರೂ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಮೀಪದ ಬಾಣಸಮುದ್ರ ಗೇಟ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.ಬೆಂಗಳೂರಿನ ಎನೋಸ್ ಬಿನ್ ಟೈಟಸ್ ಎಂಬವರು ಶಾಂತಿನಿಕೇತನ ಲೇಔಟ್ನಲ್ಲಿ ವಾಸವಾಗಿದ್ದು, ಮೈಸಾ ಕಂಪನಿಯಲ್ಲಿ ಮೆಕಾನಿಕ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಭಾನುವಾರದ ರಜಾ ದಿನವನ್ನು ಕಳೆಯಲು ತನ್ನ ಇಬ್ಬರು ಸ್ನೇಹಿತರಾದ ಅಭಿಷೇಕ್ ಮತ್ತು ಪ್ರಣವ್ ಜೊತೆ ಮಳವಳ್ಳಿ ಸಮೀಪದ ಶಿವನಸಮುದ್ರಕ್ಕೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯ ವೀಕ್ಷಿಸಿ, ಮತ್ತೆ ಬೆಂಗಳೂರಿಗೆ ಕನಕಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಹಲಗೂರು ಸಮೀಪದ ಬಾಣಸಮುದ್ರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಜಮೀನಿಗೆ ಮೂರು ಉರುಳಿ ಬಿದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಪ್ರಾಣಪಾದಿಂದ ಪಾರಾಗಿದ್ದಾರೆ.ಕಾರು ಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿದ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.