ಕಂಟೈನರ್ ಲಾರಿ ಡಿಕ್ಕಿ: ಬೈಕ್ ಸವಾರ ಸಾವು

KannadaprabhaNewsNetwork |  
Published : Jul 03, 2026, 01:45 AM IST
2ಕೆಎಂಎನ್ ಡಿ27 | Kannada Prabha

ಸಾರಾಂಶ

ಕಂಟೈನರ್‌ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೋಲಿಸ್ ಠಾಣಾ ವ್ಯಾಪ್ತಿಯ ತೊರೆಶೆಟ್ಟಹಳ್ಳಿಯಲ್ಲಿ ಜರುಗಿದೆ. ಗ್ರಾಮದ ಕಾಡಪ್ಪನವರ ಪುತ್ರ ಟಿ.ಕೆ.ರವಿ (45) ಮೃತಪಟ್ಟ ಬೈಕ್ ಸವಾರ.

ಮದ್ದೂರು: ಕಂಟೈನರ್‌ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕೆಸ್ತೂರು ಪೋಲಿಸ್ ಠಾಣಾ ವ್ಯಾಪ್ತಿಯ ತಾಲೂಕಿನ ತೊರೆಶೆಟ್ಟಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.

ಗ್ರಾಮದ ಕಾಡಪ್ಪನವರ ಪುತ್ರ ಟಿ.ಕೆ.ರವಿ (45) ಮೃತಪಟ್ಟ ಬೈಕ್ ಸವಾರ. ಮೃತ ರವಿ ಸ್ವಗ್ರಾಮದಿಂದ ಮದ್ದೂರು ನಗರಕ್ಕೆ ಆಗಮಿಸುತ್ತಿದ್ದ ವೇಳೆ ತುಮಕೂರು- ಮದ್ದೂರು ಮಾರ್ಗದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಂಟೈನರ್‌ ಲಾರಿ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಈ ಸಂಭಂದ ಮೃತರ ಪತ್ನಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಕೆಸ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನೈತಿಕ ಸಂಬಂಧ ಶಂಕಿಸಿ ಪತ್ನಿ ಹತ್ಯೆಗೈದ ಪತಿಶ್ರೀರಂಗಪಟ್ಟಣ: ಅನೈತಿಕ ಸಂಬಂಧ ಶಂಕಿಸಿ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಶ್ಮಿ ಕೊಲೆಯಾದ ಮಹಿಳೆ. ಈಕೆಯ ಪತಿ ರಮೇಶ್ ಕಬ್ಬಿಣದ ರಾಡಿನಿಂದ ತಲೆಗೆ ಒಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಅರಕೆರೆ ಠಾಣ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅರ್ಚಕ ಸೇರಿ 6 ಮಂದಿ ಅಮಾನತು: ನ್ಯಾಯಾಲಯದಲ್ಲಿಂದು ವಿಚಾರಣೆ

ಮೇಲುಕೋಟೆ:ಯೋಗನರಸಿಂಹಸ್ವಾಮಿ ಬೆಟ್ಟದ ಅರ್ಚಕ ಸ್ಥಾನದಿಂದ ಅಮಾನತ್ತಾಗಿರುವ ಎಸ್.ನಾರಾಯಣಭಟ್ಟ ಅಮಾನತ್ತು ಆದೇಶ ಮತ್ತು ವ್ಯವಸ್ಥಾಪನಾ ಸಮಿತಿ ತೀರ್ಮಾನದ ವಿರುದ್ಧ ಹೈಕೋರ್ಟ್ ಮತ್ತು ಧಾರ್ಮಿಕದತ್ತಿ ಆಯುಕ್ತರ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣ ಜುಲೈ 3 ರಂದು ವಿಚಾರಣೆಗೆ ಬರಲಿದೆ.

ದೇಗುಲದ ಹುಂಡಿಯಲ್ಲಿ ಲಕ್ಷಾಂತರ ರು. ಕಾಣಿಕೆ ಕದ್ದಿರುವ ಶಂಕೆ ಹಿನ್ನೆಲೆಯಲ್ಲಿ ಅರ್ಚಕ ಸೇರಿ 6 ಮಂದಿ ನೌಕರರ ವಿರುದ್ಧ ಇಒ ಶೀಲಾ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿತರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ನಂತರ ತುರ್ತು ಸಭೆ ಸೇರಿದ ವ್ಯವಸ್ಥಾಪನಾ ಸಮಿತಿ ಕರ್ತವ್ಯ ಲೋಪ ಸಾಬೀತಾದ ಕಾರಣ ಅರ್ಚಕ ನಾರಾಯಣಭಟ್ಟ, ಪಾರುತ್ತೇಗಾರ್ ಶ್ರೀಧರ, ಪರಿಚಾರಕ ತಿರುವೇಂಗಡಾಚಾರ್, ಕಾವಲುಗಾರ ಎಂ.ಬಿ.ಗಂಗಾಧರ, ಬಸವರಾಜು, ಮಣೇಗಾರ್ ಕಸ್ತೂರಿ ಶ್ರೀನಿವಾಸನ್ ರನ್ನು ಅಮಾನತ್ತುಗೊಳಿಸಿ ಸರ್ವಾನುಮತದಿಂದ ತೀರ್ಮಾನಿಸಿತ್ತು. ನಂತರ ಇಒ ಶೀಲಾ 6 ಮಂದಿಯನ್ನು ಅಮಾನತ್ತುಗೊಳಿಸಿದ್ದರು.ಇದನ್ನು ಪ್ರಶ್ನಿಸಿ ಅರ್ಚಕ ನಾರಾಯಣಭಟ್ಟ್ ಧಾರ್ಮಿಕ ದತ್ತಿ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಹೈಕೋರ್ಟನಲ್ಲೂ ರಿಟ್ ಅರ್ಜಿ ಸಲ್ಲಿಸಿ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡಿ ಕಾಲಮಿತಿಯಲ್ಲಿ ವಿಚಾರಣೆ ಮುಕ್ತಾಯಗೊಳಿಸುವಂತೆ ಧಾರ್ಮಿಕದತ್ತಿ ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.

ಜುಲೈ 2 ರಂದು ವಿಚಾರಣೆ ನಡೆಯದ ಕಾರಣ ಜುಲೈ 3 ರಂದು ಮಧ್ಯಾಹ್ನ 3 ಗಂಟೆಗೆ ನಿಗಧಿಯಾಗಿದೆ. ಈ ನಡುವೆ ಅಮಾನತ್ತಾಗಿರುವ ಮೂರು ಮಂದಿ ನೌಕರರ ಬೇಲ್ ಅರ್ಜಿ ಶ್ರೀರಂಗಪಟ್ಟಣದ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆಯೇ ಶೂಟೌಟ್..!
ಡೇ ಕೇರಲ್ಲಿ ಮಕ್ಕಳು ಹಠ ಮಾಡಿದ್ದಕ್ಕೆ ವಾಷಿಂಗ್‌ ಮಷಿನ್‌ನಲ್ಲಿ ಹಾಕಿ ಹಿಂಸೆ!