ಸಿಟ್ಟಲ್ಲಿ ನಾಯಿಯನ್ನು ರಸ್ತೆಗೆ ಎತ್ತಿ ಒಗೆದು ಕಾಲಿನಿಂದ ತುಳಿದು ಕೊಲೆಜಾಲತಾಣಗಳಲ್ಲಿ ವಿಡಿಯೋ ವೈರಲ್, ಆರೋಪಿ ವಿರುದ್ಧ ಭಾರೀ ಆಕ್ರೋಶ
ರಾಜ್ಯದ ಗುಣಾ ನಗರದ ಸುಭಾಷ್ ಕಾಲೊನಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚಿದ ಅಂಗಡಿ ಮುಗ್ಗಟ್ಟಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಆತನ ಬಳಿ ಎರಡು ಪುಟ್ಟ ನಾಯಿಮರಿಗಳು ಬಾಲ ಅಲ್ಲಾಡಿಸುತ್ತ ಬಂದಿವೆ. ಈ ಪೈಕಿ ಒಂದು ಮರಿ ಹಿಂದಿನಿಂದ ಆತನನ್ನು ಮುಟ್ಟಿದಾಗ ಒಮ್ಮೆಗೆ ಗಾಬರಿಗೊಂಡ ಆತ, ಸಿಟ್ಟಿನಲ್ಲಿ ನಾಯಿಮರಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಬಳಿಕ ಎದ್ದು ಹೋಗಿ ಮತ್ತೆ ನಾಯಿಯನ್ನು ಜೋರಾಗಿ ಎರಡು ಮೂರು ತುಳಿದಿದ್ದಾನೆ. ಪರಿಣಾಮ ಮರಿ ಅಲ್ಲೇ ಸಾವನ್ನಪ್ಪಿದೆ. ಈ ಘಟನೆ ಸಿಸಿಟೀವಿಯೊಂದಲ್ಲಿ ಸೆರೆಯಾಗಿದ್ದು, ನಾಯಿಮರಿ ಕೊಂದ ವ್ಯಕ್ತಿ ಭಾರೀ ಆಕ್ರೋಶ ವ್ಯಕ್ತವಾಗಿದೆ.