ಮದ್ದೂರು : ವಾಕಿಂಗ್ ಮಾಡುತ್ತಿದ್ದ ವೈದ್ಯೆ ಮೇಲೆ ಆಟೋದಲ್ಲಿ ಬಂದ 7 ಮಂದಿ ಅನ್ಯಕೋವಿನ ಯುವಕರ ಗುಂಪು ಬೆದರಿಕೆ ಹಾಕಿ ಕೊಲೆಗೆ ವಿಫಲ ಯತ್ನ ನಡೆಸಿರುವ ಘಟನೆ ಪಟ್ಟಣದ ಹೊರವಲಯದ ಹೊಳೆ ಆಂಜನೇಯಸ್ವಾಮಿ ದೇವಾಲಯದ ಬಳಿ ಗುರುವಾರ ಮುಂಜಾನೆ ಜರುಗಿದೆ.
ಪಟ್ಟಣದ ಶಿಕ್ಷಕರ ಬಡಾವಣೆಯ ಎನ್.ಸಿ.ರಾಜು ಅವರ 24 ವರ್ಷದ ಪುತ್ರಿ ಮೇಲೆ ಅನುಚಿತವಾಗಿ ವರ್ತಿಸಿದ ಯುವಕರ ಗುಂಪು ಬೆದರಿಕೆ ಹಾಕಿ ನಾಲೆ ನೀರಿಗೆ ಎಸೆದು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಸಾರ್ವಜನಿಕರು ಹಾಗೂ ಪೊಲೀಸರ ಸಕಾಲಿಕ ಆಗಮನದಿಂದಾಗಿ ವೈದ್ಯೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಎನ್.ಸಿ.ರಾಜು ಪುತ್ರಿ ವೈದ್ಯೆ ಬೆಳಗ್ಗೆ 7.30 ರ ಸುಮಾರಿಗೆ ಹೊಳೆ ಆಂಜನೇಯಸ್ವಾಮಿ ದೇವಾಲಯದ ಬಳಿಯ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ದೇಗುಲದ ಸಮೀಪದ ಬೈರನ್ ನಾಲೆ ಬಳಿ ಎರಡು ಆಟೋಗಳನ್ನು ನಿಲ್ಲಿಸಿಕೊಂಡು ಮೀನು ಹಿಡಿಯುವ ನೆಪದಲ್ಲಿ ಬಂದಿದ್ದ ಅನ್ಯಕೋಮಿನ ಯುವಕರ ಗುಂಪು ಈಕೆಯನ್ನು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಭಯಭೀತರಾದ ವೈದ್ಯೆ ಸ್ಥಳದಿಂದ ಓಡಿ ಹೋಗಿ ದಾರಿಯಲ್ಲಿ ಬರುತ್ತಿದ್ದ ಸಾರ್ವಜನಿಕರು ಹಾಗೂ ಸಹೋದರನಿಗೆ ಘಟನೆ ಬಗ್ಗೆ ವಿಷ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ದಾವಿಸಿದ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆದರಿಕೆ ಹಾಕಿದ ಬೆಂಗಳೂರು ಕೆ.ಆರ್.ಪುರಂನ ಕೆ.ಆರ್.ಸಮೀರ್ ಪುತ್ರ ಇಸ್ಮಾಯಿಲ್ ಸೇರಿದಂತೆ 7 ಮಂದಿ ಅನ್ಯ ಕೋಮಿನ
ಯುವಕರನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಎರಡು ಆಟೋ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಬಿ ಎನ್ ಎಸ್ ಕಾಯ್ದೆ ಅನ್ವಯ 78, 351 ಹಾಗೂ190 ರ ಅನ್ವಯ ಮದ್ದೂರು ಠಾಣೆ ಪಿಎಸ್ಐ ಮಂಜುನಾಥ್ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಂತರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.