ಐದು ಜನ ವಾಹನ ಕಳ್ಳರ ಸೆರೆ: ₹55 ಲಕ್ಷ ಮೌಲ್ಯದ 51 ಬೈಕ್‌ ಜಪ್ತಿ

KannadaprabhaNewsNetwork |  
Published : Jan 24, 2024, 02:02 AM IST
ಬೈಕ್‌ ಕಳವು | Kannada Prabha

ಸಾರಾಂಶ

ಐದು ಜನ ವಾಹನ ಕಳ್ಳರ ಸೆರೆ: ₹55 ಲಕ್ಷ ಮೌಲ್ಯದ 51 ಬೈಕ್‌ ಜಪ್ತಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಹನ ಕಳ್ಳರ ಮೇಲೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಐದು ಮಂದಿಯನ್ನು ಸೆರೆ ಹಿಡಿದು 55 ಲಕ್ಷ ರು. ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಆನೇಕಲ್‌ ತಾಲೂಕು ದೊಮ್ಮಸಂದ್ರದ ದಿಲೀಪ್‌, ಚಿನ್ನಪ್ಪನಹಳ್ಳಿಯ ರಿಯನ್, ಮೊಹಮ್ಮದ್‌ ತೈರುಲ್ಲಾ, ಆಂಧ್ರಪ್ರದೇಶದ ಶಬಾನ್‌ ಹಾಗೂ ಅರ್ಬಾಜ್‌ ಬಂಧಿತರಾಗಿದ್ದು, ಆರೋಪಿಗಳಿಂದ 55 ಲಕ್ಷ ರು. ಮೌಲ್ಯದ 51 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಸಂತೋಷ್ ರೆಡ್ಡಿ ಅಲಿಯಾಸ್ ಪೂರಿ ಪತ್ತೆಗೆ ತನಿಖೆ ನಡೆದಿದೆ. ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ರಾತ್ರಿ ವೇಳೆ ಕಳವು ಮಾಡಿ ಬಳಿಕ ಆರೋಪಿಗಳು ಮಾರುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾರತ್ತಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾಣೇಕೊಪ್ಪ ನೇತೃತ್ವದಲ್ಲಿ ಮಾರತ್ತಹಳ್ಳಿ, ವೈಟ್‌ಫೀಲ್ಡ್ ಹಾಗೂ ವರ್ತೂರು ಠಾಣೆಗಳ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೇಪಾಳಿ ಗ್ಯಾಂಗ್‌ಗೆ ಪೂರಿ ಕ್ಯಾಪ್ಟನ್‌:

ನೇಪಾಳ ಮೂಲದ ರಿಯನ್‌, ಹಲವು ದಿನಗಳ ಹಿಂದೆ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ. ಬಳಿಕ ಚಿನ್ನಪ್ಪನಹಳ್ಳಿಯಲ್ಲಿ ನೆಲೆಸಿದ್ದ ಆತನಿಗೆ ಕುಖ್ಯಾತ ವಾಹನ ಕಳ್ಳ ಸಂತೋಷ ಅಲಿಯಾಸ್ ಪೂರಿ ಪರಿಚಯವಾಗಿದೆ. ಈ ಸ್ನೇಹದಲ್ಲಿ ಪೂರಿ ಜತೆ ಸೇರಿ ಆತ ಸಹ ವಾಹನ ಕಳ್ಳತನದಲ್ಲಿ ನಿರತನಾಗಿದ್ದ. ಈಗ ಪೂರಿ ಸಹಚರಾದ ರಿಯನ್ ಹಾಗೂ ದಿಲೀಪ್ ಸಿಕ್ಕಿಬಿದ್ದಿದ್ದು, ಈ ಆರೋಪಿಗಳಿಂದ 15 ಲಕ್ಷ ರು. ಮೌಲ್ಯದ 24 ವಾಹನಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!