ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಘಟನೆಯಲ್ಲಿ ಹುರುಳಿ ಗಂಗನಹಳ್ಳಿಯ ಅಂಬುಜ (35) ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರೇ, ಪ್ರತಾಪ್, ಪದ್ಮಮ್ಮ ಸೇರಿದಂತೆ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. 10 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿ ಹಾಸನ, ಮೈಸೂರು, ಕೆ.ಆರ್.ಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ತಾಲೂಕಿನ ಹುಬ್ಬನಹಳ್ಳಿ ಗ್ರಾಮದ ದೇವಾಲಯಕ್ಕೆ ಹುರುಳಿಗಂಗನಹಳ್ಳಿಯ ಕರೀಗೌಡರ ಮೊಮ್ಮಗನ ನಾಮಕರಣಕ್ಕೆ ಸುಮಾರು 18 ಮಂದಿ ಗೂಡ್ಸ್ ವಾಹನದಲ್ಲಿ ತೆರಳಿ ವಾಪಸ್ ಸ್ವಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಗೂಡ್ಸ್ ಆಟೋ ವೇಗವಾಗಿ ಬಂದ ಪರಿಣಾಮ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.ಪಟ್ಟಣದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಸಾರ್ವಜನಿಕರ ಸಹಕಾರದಲ್ಲಿ ಆಸ್ಪತ್ರೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.