ಮಳವಳ್ಳಿ:
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಉಗನ್ಯ ಗ್ರಾಮದ ಪರಶಿವಮೂರ್ತಿ ಪತ್ನಿ ಸವಿತಾ (45) ಮೃತಪಟ್ಟವರು.
ಗೌಡಗೆರೆ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿ ಬೈಕ್‌ನಲ್ಲಿ ಪತಿಯೊಂದಿಗೆ ವಾಪಸ್ ಆಗುವ ವೇಳೆ ಗೌಡಗೆರೆ ಗೇಟ್ ಬಳಿ ಎದುರಿನಿಂದ ಬಂದ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಿತಾ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಗುವಿನೊಂದಿಗೆ ತಾಯಿ ನಾಪತ್ತೆ: ದೂರು ದಾಖಲು
ತಾಲೂಕು ಆತಗೂರು ಹೋಬಳಿಯ ತೊರೆಶೆಟ್ಟಿಹಳ್ಳಿ ಮಂಜುನಾಥ್ ಪತ್ನಿ ಟಿ.ಜಿ.ಧನುಶ್ರೀ (24) ತನ್ನ ನಾಲ್ಕುವರೆ ವರ್ಷದ ಮಗ ಟಿ.ಎಂ.ದಾನಿಶ್ ಗೌಡನೊಂದಿಗೆ ಕಳೆದ ಜುಲೈ 4ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಧನುಶ್ರೀ 5.5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಕೋಲು ಮುಖ, ಗೋದಿ ಮೈಬಣ್ಣ ಈಕೆ ಮನೆಯಿಂದ ಹೊರಡುವಾಗ ಮೆರೂನ್ ರೆಡ್ ಕಲರ್ ಚೂಡಿದಾರ್ ಧರಿಸಿದ್ದಾರೆ. ಮಗ ದಾನಿಶ್ ಗೌಡ 4 ಅಡಿ ಎತ್ತರ, ಕೆಂಪು ಮೈಬಣ್ಣ , ದುಂಡು ಮುಖ ಹಾಗೂ ಕ್ರೀಮ್ ಕಲರ್ ಶರ್ಟ್, ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಇಬ್ಬರ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.