ಕೊಡಗು ಬಾಲಕಿ ಶಿರ ಮರದ ಮೇಲೆ ಪತ್ತೆ: ಹಂತಕನ ಸೆರೆ

ಸಾರಾಂಶ

  ತನ್ನ ಜತೆ ನಿಶ್ಚಿತಾರ್ಥ ಮಾಡಿಕೊಂಡ 16 ವರ್ಷದ ಬಾಲಕಿಯ ಶಿರಚ್ಛೇದ ಮಾಡಿ ಆಕೆಯ ತಲೆ ಜತೆ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ 

ಮಡಿಕೇರಿ: ತನ್ನ ಜತೆ ನಿಶ್ಚಿತಾರ್ಥ ಮಾಡಿಕೊಂಡ 16 ವರ್ಷದ ಬಾಲಕಿಯ ಶಿರಚ್ಛೇದ ಮಾಡಿ ಆಕೆಯ ತಲೆ ಜತೆ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಾಲಕಿಯ ಶಿರ ಹತ್ಯೆ ನಡೆದ ಸ್ಥಳದಿಂದ 300 ಮೀ. ದೂರದಲ್ಲಿ ಮರದ ಮೇಲೆ ಪತ್ತೆಯಾಗಿದೆ.

ಬಾಲಕಿಯನ್ನು ಆರೋಪಿ ಪ್ರಕಾಶ್‌ (34) ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಬಾಲಕಿ ಅಪ್ರಾಪ್ತೆಯಾದ ಕಾರಣ ಬಾಲ್ಯ ವಿವಾಹಕ್ಕೆ ಅಧಿಕಾರಿಗಳು ತಡೆಯೊಡ್ಡಿದ್ದರು. ಈ ಸಿಟ್ಟಿನಲ್ಲಿ ಆತ ಬಾಲಕಿಯನ್ನು ಕ್ರೂರವಾಗಿ ಕೊಂದಿದ್ದ ಎನ್ನಲಾಗಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದಿದ್ದರಿಂದ ಕೋಪಗೊಂಡು ಆಕೆಯ ಮನೆಗೆ ನುಗ್ಗಿ, ಮನೆಯಿಂದ ಎಳೆದುಕೊಂಡು ಬಂದು, ಆಕೆಯ ರುಂಡ ಕತ್ತರಿಸಿ, ರುಂಡ ಸಮೇತ ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನೆ ನಡೆದ ಸ್ವಲ್ಪ ದೂರದಲ್ಲಿ ಆರೋಪಿ ಪ್ರಕಾಶ್‌, ಕೃತ್ಯಕ್ಕೆ ಬಳಸಿದ್ದ ಕತ್ತಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಈ ಮಧ್ಯೆ, ಹತ್ಯೆ ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ, ಆರೋಪಿಯನ್ನಾಗಲಿ ಅಥವಾ ಆತನ ಮೃತದೇಹವನ್ನಾಗಲಿ, ಬಾಲಕಿಯ ರುಂಡವನ್ನಾಗಲಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಾಕ್ಷಿಗಾಗಿ ಬಾಲಕಿಯ ತಲೆಯನ್ನು ಪತ್ತೆ ಹಚ್ಚಲೇ ಬೇಕಾದ ಅನಿವಾರ್ಯತೆಯಿಂದ ಪಕ್ಕದ ಕಾಡಿನಲ್ಲಿ ಪೊಲೀಸರು ಶ್ವಾನದಳ ಹಾಗೂ ಗ್ರಾಮಸ್ಥರೊಂದಿಗೆ ಹುಡುಕಾಟ ಮುಂದುವರಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿದೆ. ಬಾಲಕಿಯ ಶವವನ್ನು ಮಡಿಕೇರಿ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದೆ.

ಮನೆಗೆ ನುಗ್ಗಿ ಎಳೆದೊಯ್ದು ರುಂಡ ಕತ್ತರಿಸಿದ:

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಂಬಾರಗುಂಡಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಆರೋಪಿ ಪ್ರಕಾಶ್ ಪ್ರೀತಿಸುತ್ತಿದ್ದ. ಗುರುವಾರ ಅವರ ಮದುವೆಯ ನಿಶ್ಚಿತಾರ್ಥಕ್ಕೆ ಪೋಷಕರು ಮುಂದಾಗಿದ್ದರು. 16 ವರ್ಷದ ಬಾಲಕಿ ಜೊತೆ 32 ವರ್ಷದ ಪ್ರಕಾಶ್‌ನನ್ನು ಮದುವೆ ಮಾಡಲು ನಿಶ್ಚಿತಾರ್ಥ ನಡೆದಿತ್ತು. ಆದರೆ, ಈ ವಿಷಯವನ್ನು ಮಕ್ಕಳ ಸಹಾಯವಾಣಿಗೆ ಯಾರೋ ತಿಳಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮುಚ್ಚಳಿಕೆ ಬರೆಸಿಕೊಂಡಿದ್ದರು. ಎರಡೂ ಕಡೆಯವರಿಗೆ ತಿಳುವಳಿಕೆ ನೀಡಿ 18 ವರ್ಷ ಆದ ನಂತರವೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಇದಕ್ಕೆ ಉಭಯ ಕಡೆಯವರು ಒಪ್ಪಿಕೊಂಡಿದ್ದರು.

ಆದರೆ, ಗುರುವಾರ ಸಂಜೆ 5.30ರ ವೇಳೆಗೆ ಪ್ರಕಾಶ್, ಮತ್ತೆ ಬಾಲಕಿಯ ಮನೆಗೆ ನುಗ್ಗಿ ಆಕೆಯ ತಂದೆ ಹಾಗೂ ತಾಯಿಯ ಮೇಲೆ ಹಲ್ಲೆ ಮಾಡಿ, ಮನೆಯಿಂದ ಬಾಲಕಿಯನ್ನು ಸುಮಾರು 100 ಮೀಟರ್ ಹೊರಕ್ಕೆ ಎಳೆದುಕೊಂಡು ಹೋಗಿ ಅಲ್ಲಿಯೇ ಬಾಲಕಿಯ ದೇಹವನ್ನು ಕತ್ತರಿಸಿದ್ದ. ತಲೆಯನ್ನು ತುಂಡು ಮಾಡಿ ನಂತರ ದುಷ್ಕರ್ಮಿ ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದಾನೆ.

Share this article