ಯುವತಿಗೆ ಕಾರು ಚಾಲನೆ ತರಬೇತಿ ನೀಡುವಾಗ ಹಸ್ತಮೈಥುನ ಮಾಡಿಕೊಂಡ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ

KannadaprabhaNewsNetwork |  
Published : Jul 21, 2024, 01:22 AM ISTUpdated : Jul 21, 2024, 04:29 AM IST
Is there any problems from masturbation?

ಸಾರಾಂಶ

ಯುವತಿಗೆ ಕಾರು ಚಾಲನೆ ತರಬೇತಿ ನೀಡುವಾಗ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.

 ಬೆಂಗಳೂರು :  ಯುವತಿಗೆ ಕಾರು ಚಾಲನೆ ತರಬೇತಿ ನೀಡುವಾಗ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ ಆರೋಪದಡಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಾಲಕ್ಷ್ಮಿಪುರದ 18 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಏನಿದು ಪ್ರಕರಣ?:

ಕಾರು ಚಾಲನೆ ಕಲಿಯಲು ಯುವತಿ ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನಲ್ಲಿ ನೋಂದಣಿ ಮಾಡಿಕೊಂಡು ಕೋರ್ಸ್‌ ಮುಗಿಸಿದ್ದಾರೆ. ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪನೇ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದಾರೆ. ಕೋರ್ಸ್‌ ಮುಗಿದ ಬಳಿಕ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಗೆ ಹೇಳಿದ್ದಾನೆ.

15 ದಿನ ಸ್ಪೆಷಲ್‌ ಕ್ಲಾಸ್‌:

ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪನಿಗೆ ₹10,500 ಪಾವತಿಸಿದ್ದಾರೆ. ಅದರಂತೆ ಅಣ್ಣಪ್ಪ, ಜೂ.26ರಂದು ವಿಶೇಷ ಕ್ಲಾಸ್‌ ಆರಂಭಿಸಿದ್ದಾನೆ. ಪ್ರತಿ ದಿನ ಯುವತಿಯ ಮನೆ ಬಳಿ ಬಂದು ಆಕೆ ಕಾರಿನಲ್ಲೇ ಒಂದು ಗಂಟೆ ಚಾಲನೆ ತರಬೇತಿ ನೀಡುತ್ತಿದ್ದ. ಜು.7ರಂದು ಬೆಳಗ್ಗೆ 6 ಗಂಟೆಗೆ ಯುವತಿ ಮನೆ ಬಳಿ ಬಂದಿರುವ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದಾನೆ.

ಕಾರಿನಲ್ಲಿ ಶಿಶ್ನ ಹಿಡಿದು ಅಸಭ್ಯ ವರ್ತನೆ

ಬಸವೇಶ್ವರನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ಯುವತಿ ಕಾರು ಚಾಲನೆ ಮಾಡಿದ್ದಾರೆ. ಈ ವೇಳೆ ಪಕ್ಕದ ಆಸನದಲ್ಲಿ ಕುಳಿತಿದ್ದ ಅಣ್ಣಪ್ಪ, ಮುಷ್ಠಿ ಮೈಥುನ ಆರಂಭಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ, ಕಾರನ್ನು ಮನೆಗೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಅಣ್ಣಪ್ಪ ಎಚ್ಚೆತ್ತುಕೊಂಡು ಸುಮ್ಮನಾಗಿದ್ದಾನೆ. ನಂತರ ಕಾರು ಚಾಲನೆ ತರಬೇತಿ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಮುಜುಗರ ಉಂಟು ಮಾಡಿದ ಅಣ್ಣಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ ಮೂವರ ಬಂಧನ
ಬೆಂಗಳೂರಿನ ಸಿಂಧಿ ಶಾಲೆಯಲ್ಲಿ ಕನ್ನಡ ಮಾತಾಡಿದರೆ ದಂಡ: ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ದೃಢ