ಕೊಪ್ಪ ಠಾಣೆ ಪೇದೆಯನ್ನೇ ಬಂಧಿಸಿದ ಮದ್ದೂರು ಪಟ್ಟಣ ಠಾಣೆ ಪೊಲೀಸರು...!

KannadaprabhaNewsNetwork |  
Published : Feb 04, 2024, 01:32 AM IST
3ಕೆಎಂಎನ್ ಡಿ25ಕೆಂಡಗಣ್ಣಯ್ಯ | Kannada Prabha

ಸಾರಾಂಶ

ಅಪರಾಧ ಪ್ರಕರಣಗಳನ್ನು ತಪ್ಪಿಸಬೇಕಾದ ಪೊಲೀಸರೇ ಕಳ್ಳರೊಂದಿಗೆ ಶಾಮೀಲು ಆಗಿರುವುದು ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ಮದ್ದೂರು ತಾಲೂಕಿನ ಕೊಪ್ಪ ಠಾಣೆ ಪೊಲೀಸ್ ಪೇದೆ ಕೆಂಡ ಗಣ್ಣಯ್ಯನನ್ನು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿರುವ ಪಟ್ಟಣದ ಪೊಲೀಸರು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಅವರ ನಿವಾಸದಲ್ಲಿ ಹಾಜರಪಡಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಕೊಪ್ಪ ಪೊಲೀಸ್ ಠಾಣೆ ಪೇದೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪರಾಧ ಪ್ರಕರಣಗಳನ್ನು ತಪ್ಪಿಸಬೇಕಾದ ಪೊಲೀಸರೇ ಕಳ್ಳರೊಂದಿಗೆ ಶಾಮೀಲು ಆಗಿರುವುದು ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ತಾಲೂಕಿನ ಕೊಪ್ಪ ಠಾಣೆ ಪೊಲೀಸ್ ಪೇದೆ ಕೆಂಡ ಗಣ್ಣಯ್ಯನನ್ನು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿರುವ ಪಟ್ಟಣದ ಪೊಲೀಸರು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಅವರ ನಿವಾಸದಲ್ಲಿ ಹಾಜರಪಡಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಪೇದೆ ಕೆಂಡಗಣ್ಣಯ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೇದೆಯಾಗಿದ್ದಾನೆ. ಎರಡು ತಿಂಗಳ ನಂತರ ಕೊಪ್ಪ ಠಾಣೆಗೆ ವರ್ಗಾವಣೆಗೊಂಡಿದ್ದರು. ಶ್ರೀರಂಗಪಟ್ಟಣ ಠಾಣೆಯಲ್ಲಿದ್ದಾಗ ನಗುವನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಪೇದೆ ಕೆಂಡಗಣ್ಣಯ್ಯ ಆರೋಪಿಗಳೊಂದಿಗೆ ಶ್ಯಾಮಿಲಾಗಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 120 ಗ್ರಾಂ ಚಿನ್ನಾಭರಣ ದಲ್ಲಿ ಕತ್ತಿನ ಸರ ಹಾಗೂ ಬ್ರಾಸ್ ಲೈಟ್ ಮಾಡಿಸಿಕೊಂಡಿದ್ದರು. ಅಲ್ಲದೇ, ಉಳಿದ ಚಿನ್ನವನ್ನು ಮಾರಾಟ ಮಾಡಿದ್ದರು.

ಆ ನಂತರ ನಗುವನಹಳ್ಳಿ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪಟ್ಟಣದ ಕೆಂಗಲ್ ಹನುಮಂತಯ್ಯ ನಗರ ಬಡಾವಣೆಯ ಶರತ್ ಕ್ಲಿನಿಕ್ ನ ಡಾ.ಚಂದ್ರು ಎಂಬುವವರ ಮನೆಯಲ್ಲಿ ಕಳೆದ ಜ.18ರಂದು ನಡೆದಿದ್ದ ಲಕ್ಷಾಂತರ ರು.ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿದ್ದ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆ ಸಿಪಿಐ ವೆಂಕಟೇಗೌಡ ಹಾಗು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಪೇದೆ ಕೆಂಡಗಣ್ಣಯ್ಯ ಆರೋಪಿಯಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳ ಪೈಕಿ 3.50 ಲಕ್ಷ ರು.ಮೌಲ್ಯದ 120 ಗ್ರಾಂ ಚಿನ್ನವನ್ನು ದುರುಪಯೋಗಪಡಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಪೇದೆ ಕೆಂಡಗಣ್ಣಯ್ಯ ನಿಂದ 61 ಗ್ರಾಂ ಚಿನ್ನವನ್ನು ವಶ ಕ್ಕೆ ತೆಗೆದುಕೊಂಡು ಪ್ರಕರಣ ದಾಖಲ ಮಾಡಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರ ಆದೇಶ ಮೇರೆಗೆ ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಸ್ಪತ್ರೆಯ ಬಟ್ಟೆ ಬದಲಿಸುವ ಮಹಿಳೆ ದೃಶ್ಯ ಸೆರೆ ಹಿಡಿದ ಸಿಬ್ಬಂದಿ ಬಂಧನ
ಹನಿಮೂನ್‌ ಅರ್ಧಕ್ಕೆ ಬಿಟ್ಟು ಬಂದು ಆತ್ಮಹತ್ಯೆ ಯತ್ನಿಸಿದಳು: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ