ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹನಿಮೂನ್‌ಗೆ ಶ್ರೀಲಂಕಾ ದೇಶಕ್ಕೆ ತೆರಳಿದ್ದ ನವ ವಿಹಾಹಿತೆಯೊಬ್ಬಳು ಅರ್ಧಕ್ಕೆ ಮರಳಿ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹನಿಮೂನ್‌ಗೆ ಶ್ರೀಲಂಕಾ ದೇಶಕ್ಕೆ ತೆರಳಿದ್ದ ನವ ವಿಹಾಹಿತೆಯೊಬ್ಬಳು ಅರ್ಧಕ್ಕೆ ಮರಳಿ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಮೂರ್ತಿ ನಗರದ ಗಾನವಿ (26) ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಮನೆಯಲ್ಲಿ ಬುಧವಾರ ನೇಣು ಬಿಗಿದುಕೊಂಡು ಗಾನವಿ ಆತ್ಮಹತ್ಯೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದೂವರೆ ತಿಂಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ಸೂರಜ್ ಹಾಗೂ ಗಾನವಿ ವಿವಾಹವಾಗಿದ್ದು, ಮದುವೆ ಬಳಿಕ ನವ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಈ ಮಧ್ಯೆ ದಂಪತಿ ಶ್ರೀಲಂಕಾ ದೇಶಕ್ಕೆ ಮಧುಚಂದ್ರಕ್ಕೆ (ಹನಿಮೂನ್) ತೆರಳಿದ್ದರು. ಅಲ್ಲಿ ಮನಸ್ತಾಪ ಉಂಟಾಗಿದ್ದು, ಅರ್ಧದಲ್ಲೇ ಮನೆಗೆ ಮರಳಿದ್ದರು. ಈ ಸಂಬಂಧ ಗಾನವಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಹಾಗೂ ಕುಟುಂಬದವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಕಳೆದ ಅಕ್ಟೋಬರ್ 29 ರಂದು ಗಾನವಿ - ಸೂರಜ್ ಮದುವೆ ಆಗಿತ್ತು. ವಿವಾಹವಾದ ಒಂದು ತಿಂಗಳ ನಂತರ ಬೀಗರ ಒತ್ತಾಯಕ್ಕೆ ಮಣಿದು ಅರಮನೆ ಮೈದಾನದಲ್ಲಿ ಮದುವೆ ಆರತಾಕ್ಷತೆಯನ್ನು ಗಾನವಿ ಕುಟುಂಬದವರು ನಡೆಸಿದ್ದರು. ಆನಂತರ ಶ್ರೀಲಂಕಾಕ್ಕೆ 10 ದಿನಗಳು ಹನಿಮೂನ್‌ಗೆ ನವ ಜೋಡಿಯನ್ನು ಕಳುಹಿಸಿದ್ದರು. ಹೀಗಿದ್ದರೂ ಹಣಕ್ಕಾಗಿ ಗಾನವಿಗೆ ಸೂರಜ್ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.