ಜಾಲತಾಣದಲ್ಲಿ ಶ್ರೀಮಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ರೀಲ್ಸ್‌ ರಾಣಿ ಸೆರೆ

KannadaprabhaNewsNetwork |  
Published : Jun 23, 2026, 04:00 AM ISTUpdated : Jun 23, 2026, 04:35 AM IST
Insta

ಸಾರಾಂಶ

ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯವಾಗುವ ಹಣವಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಆರೋಪದ ಮೇರೆಗೆ ಮಹಿಳೆಯನ್ನು ಮಹಾಲಕ್ಷ್ಮೀಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವನಿತಾ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಳು.

  ಬೆಂಗಳೂರು :  ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯವಾಗುವ ಹಣವಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಆರೋಪದ ಮೇರೆಗೆ ಮಹಿಳೆಯನ್ನು ಮಹಾಲಕ್ಷ್ಮೀಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವನಿತಾ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಳು.

ಕಷ್ಟದ ನೆಪ ಹೇಳಿ ಹಣ

ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗುವ ಯುವಕರಿಗೆ ತನ್ನನ್ನು ತಾನು ಕಿರುತೆರೆ ನಟಿ ಎಂದು ವನಿತಾ ಪರಿಚಯಿಸಿಕೊಂಡು ನಂತರ ಅವರ ಜತೆ ಸಲುಗೆ ಬೆಳೆಸಿಕೊಂಡು ಕಷ್ಟದ ನೆಪ ಹೇಳಿ ಹಣ ಪಡೆಯುತ್ತಿದ್ದಳು.  

ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ

ಅಡವಿಟ್ಟಿರುವ ಆಭರಣ ಬಿಡಿಸಿಕೊಳ್ಳಲು ಹಣದ ಅವಶ್ಯಕತೆ ಇದೆ. ಎರಡ್ಮೂರು ದಿನದಲ್ಲಿ ಸಾಲ ಮರಳಿ ಕೊಡುವುದಾಗಿ ನಂಬಿಸುತ್ತಿದ್ದಳು. ಸಿಸಿ ಕ್ಯಾಮೆರಾಗಳಿಲ್ಲದ ಜಾಗಗಳಲ್ಲಿ ಹಣ ಪಡೆಯುತ್ತಿದ್ದಳು. ಹಣ ನೀಡಿದವರು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಮೆಸೇಜ್ ಮಾಡಿದರೆ ರಿಪ್ಲೈ ಮಾಡುತ್ತಿರಲಿಲ್ಲ.

ಇದೇ ರೀತಿ ಪರಿಚಿತನಾದ ಯುವಕನಿಂದ 1 ಲಕ್ಷ ರು. ಪಡೆದು ವಂಚಿಸಿದ್ದಳು. ವಂಚನೆಗೆ ಒಳಗಾದ ಯುವಕ ಈ ಸಂಬಂಧ ವನಿತಾ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಕೆಯ ವಿರುದ್ಧ ಗೋವಿಂದರಾಜನಗರ, ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ವನಿತಾ ಇದೇ ರೀತಿ ಸಾಕಷ್ಟು ಮಂದಿಗೆ ವಂಚಿಸಿರುವ ಸಾಧ್ಯತೆ ಇದೆ. ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ
ಸ್ನೇಹಿತರಿಂದಲೇ ಯುವಕನ ಹತ್ಯೆ: ಆರೋಪಿಗಳಿಬ್ಬರ ಬಂಧನ