ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ: ಶಾಸಕರ ಪುತ್ರಿ ಬೇಷರತ್ ಕ್ಷಮೆ

KannadaprabhaNewsNetwork |  
Published : Sep 23, 2026, 01:45 AM IST
೨೨ಕೆಎಂಎನ್‌ಡಿ-೧೨ಐಶ್ವರ್ಯ | Kannada Prabha

ಸಾರಾಂಶ

ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕರ ಪುತ್ರಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಕಪಾಳಮೋಕ್ಷ ನಡೆಸಿ ದರ್ಪ ಪ್ರದರ್ಶಿಸಿದ ಬಳಿಕವೂ ಕ್ಷಮೆಯಾಚಿಸದೆ ಮೊಂಡಾಟವಾಡುತ್ತಿದ್ದಾಕೆಗೆ ನ್ಯಾಯಾಲಯ ಚಾಟಿ ಬೀಸಿದ್ದರಿಂದ ಕ್ಷಮೆ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕರ ಪುತ್ರಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಕಪಾಳಮೋಕ್ಷ ನಡೆಸಿ ದರ್ಪ ಪ್ರದರ್ಶಿಸಿದ ಬಳಿಕವೂ ಕ್ಷಮೆಯಾಚಿಸದೆ ಮೊಂಡಾಟವಾಡುತ್ತಿದ್ದಾಕೆಗೆ ನ್ಯಾಯಾಲಯ ಚಾಟಿ ಬೀಸಿದ್ದರಿಂದ ಕ್ಷಮೆ ಕೋರಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕರ ಪುತ್ರಿ ಐಶ್ವರ್ಯ ದೇವರ ದರ್ಶನಕ್ಕೆ ಮಕ್ಕಳೊಂದಿಗೆ ಆ.೧೨ರಂದು ಆರತಿ ಉಕ್ಕಡಕ್ಕೆ ಆಗಮಿಸಿದ್ದರು. ಗರ್ಭಗುಡಿ ಬಳಿ ಪಿಎಸ್‌ಐ ಸವಿತಾ ಪಾಟೀಲ್ ಕರ್ತವ್ಯದಲ್ಲಿದ್ದರು. ಅವರ ಬಳಿ ಬಂದ ಐಶ್ವರ್ಯ ಗರ್ಭಗುಡಿ ಒಳಗೆ ತೆರಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಜನಸಂದಣಿ ಹೆಚ್ಚಿರುವುದರಿಂದ ಸ್ವಲ್ಪ ಹೊತ್ತು ಕಾಯುವಂತೆ ತಿಳಿಸಿದರೂ ಕೇಳದೆ ಮಾತಿನ ಚಕಮಕಿ ನಡೆಸಿ ಅಂತಿಮವಾಗಿ ಸವಿತಾ ಪಾಟೀಲ್ ಕೆನ್ನೆಗೆ ಬಾರಿಸಿ ಐಶ್ವರ್ಯ ದರ್ಪ ತೋರಿದ್ದರು.

ಪುತ್ರಿ ಮಾಡಿದ ತಪ್ಪಿಗೆ ಶಾಸಕ ಸುರೇಶ್‌ಗೌಡ ಅವರು ಮರು ದಿನವೇ ಕ್ಷಮೆ ಕೋರಿದ್ದರು. ಆದರೆ, ಐಶ್ವರ್ಯ ಕ್ಷಮೆ ಕೋರದೆ ಉದ್ಧಟತನ ಪ್ರದರ್ಶಿಸುತ್ತಾ ಬಂದಿದ್ದರು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಐಶ್ವರ್ಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಐಶ್ವರ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸಮಯದಲ್ಲಿ ನ್ಯಾಯಾಲಯ, ನೀನು ಮಾಡಿರುವುದು ದೊಡ್ಡ ತಪ್ಪು. ಮೊದಲು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಅಧಿಕಾರಿಗೆ ಕಪಾಳಮೋಕ್ಷ ನಡೆಸಿದ್ದಕ್ಕೆ ಕ್ಷಮೆ ಕೋರುವಂತೆ ಐಶ್ವರ್ಯಗೆ ತಾಕೀತು ಮಾಡಿತ್ತು. ಇಲ್ಲದಿದ್ದರೆ ಜಾಮೀನು ಅರ್ಜಿಯನ್ನು ವಜಾಗೊಳಿಸುವುದಾಗಿ ಎಚ್ಚರಿಸಿತ್ತು. ಆ ಹಿನ್ನೆಲೆಯಲ್ಲಿ ಐಶ್ವರ್ಯ ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಉದ್ವೇಗದಲ್ಲಿ ನಡೆಯಬಾರದ ಅಹಿತಕರ ಘಟನೆ ನಡೆದು ಹೋಗಿದೆ. ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ನೋವಾಗಿದ್ದರೆ ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಹಾಸ್ಟೆಲ್ ನಿವೃತ್ತ ಅಧೀಕ್ಷಕರ ಮನೆ ಮೇಲೆ ಲೋಕಾಯುಕ್ತ ದಾಳಿ
ಸೌಜನ್ಯ ಹತ್ಯೆ ಕೇಸ್‌ ಮರುತನಿಖೆ ನಡೆಸಿ: ಸುಪ್ರೀಂ ನಿರ್ದೇಶನ