- ಕಂದಾಯ ವಿಭಾಗದ 1.20 ಕೋಟಿ ಮಾಹಿತಿ ಅಪ್ಲೋಡ್‌ಗೆ ಚಿಂತನೆ । ಅಂದಾಜು 2 ಕೋಟಿ ರು.ವೆಚ್ಚಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿರುವ ಎಲ್ಲ ಆಸ್ತಿಗಳ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಲು ಬಿಬಿಎಂಪಿ ಕಂದಾಯ ವಿಭಾಗ ಮುಂದಾಗಿದೆ.ಕಿಯೋನಿಕ್ಸ್ ಮೂಲಕ ಆಸ್ತಿ ದಾಖಲೆಗಳನ್ನು ಗಣಕೀಕರಣ ಮಾಡಲು ಈ ಹಿಂದೆ ತೀರ್ಮಾನಿಸಿತ್ತಾದರೂ ವಿವಿಧ ಕಾರಣದಿಂದ ಟೆಂಡರ್ ಆಹ್ವಾನಿಸಿ ಖಾಸಗಿ ಸಂಸ್ಥೆಗಳಿಂದ ದಾಖಲೆಗಳನ್ನು ಗಣಕೀಕರಣ ಮಾಡಲು ಟೆಂಡರ್ ಆಹ್ವಾನಿಸಿದೆ.ಬಿಬಿಎಂಪಿಯ 63 ಕಂದಾಯ ಉಪ ವಿಭಾಗಗಳಿದ್ದು, 20 ಲಕ್ಷಕ್ಕೂಅಧಿಕ ಆಸ್ತಿಗಳ ದಾಖಲೆಗಳನ್ನು 5,100 ರಿಜಿಸ್ಟರ್ ಪುಸ್ತಕದಲ್ಲಿ ದಾಖಲು ಮಾಡಲಾಗಿದೆ. ಪ್ರತಿ ಆಸ್ತಿ ರಿಜಿಸ್ಟರ್ ಪುಸ್ತಕದಲ್ಲಿ 200 ಹಾಳೆಗಳು ಇರಲಿವೆ. ಪ್ರತಿ ಹಾಳೆಯಲ್ಲಿ 3 ರಿಂದ 4 ಆಸ್ತಿಗಳ ಮಾಹಿತಿ ಇರಲಿದೆ. ಈ ಪ್ರಕಾರ ಸುಮಾರು 11 ಲಕ್ಷ ಪುಟಗಳನ್ನು ಸ್ಕ್ಯಾನಿಂಗ್ ಮಾಡಬೇಕು. ಜತೆಗೆ ಪ್ರತಿ ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ಮಾಲೀಕರ ಹೆಸರು. ಆಸ್ತಿ ಸಂಖ್ಯೆ, ನೋಂದಣಿ ಸಂಖ್ಯೆ, ವಿಸ್ತೀರ್ಣ, ಬಡಾವಣೆ, ರಸ್ತೆ ಸೇರಿದಂತೆ ಸುಮಾರು 6 ರಿಂದ 8 ಮಾಹಿತಿಗಳನ್ನು ದಾಖಲು ಮಾಡಬೇಕಿದೆ. ಈ ಪ್ರಕಾರ ಸುಮಾರು 1.20 ಕೋಟಿ ಮಾಹಿತಿಯನ್ನು ಗಣಕಯಂತ್ರಕ್ಕೆ ದಾಖಲು ಮಾಡಬೇಕಿದೆ. ಈ ಕಾರ್ಯಕ್ಕೆ ಸುಮಾರು 90 ದಿನ ಬೇಕಾಗಲಿದೆ. 2 ಕೋಟಿ ರು.ವೆಚ್ಚವಾಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೊಟೋ: ಪಾಲಿಕೆ ಕಚೇರಿ