ವಿಕ್ರಂ ವಿರುದ್ಧ ಕರ್ನಾಟಕದಲ್ಲಿ 61, ಕೇರಳದಲ್ಲಿ 19 ಕೇಸ್‌: ರೂಪಾ

KannadaprabhaNewsNetwork |  
Published : Nov 20, 2024, 12:32 AM IST
ನಕ್ಸಲೇಟ್‌ ಕಾರ್ಯಾಚರಣೆ | Kannada Prabha

ಸಾರಾಂಶ

ವಿಕ್ರಂ ಗೌಡ ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ. ಈತನ ಮೇಲೆ ಕರ್ನಾಟಕದಲ್ಲಿ ಕೊಲೆ, ಅಪಹರಣ ಸೇರಿ 61 ಮತ್ತು ಕೇರಳದಲ್ಲಿ 19 ಪ್ರಕರಣಗಳಿವೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ವಿಕ್ರಂ ಗೌಡ ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ. ಈತನ ಮೇಲೆ ಕರ್ನಾಟಕದಲ್ಲಿ ಕೊಲೆ, ಅಪಹರಣ ಸೇರಿ 61 ಮತ್ತು ಕೇರಳದಲ್ಲಿ 19 ಪ್ರಕರಣಗಳಿವೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್‌ ಹೇಳಿದ್ದಾರೆ.

ರಾಜ್ಯದಲ್ಲಿ ನಕ್ಸಲ್ ಶರಣಾಗತಿ ನೀತಿ ಜಾರಿಯಲ್ಲಿದ್ದು, ಅದರಂತೆ ಎಲ್ಲ ನಕ್ಸಲರಿಗೆ ಶರಣಾಗುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಅದರಂತೆ ಈ ಕಾರ್ಯಾಚರಣೆ ನಡೆದಿದೆ ಎಂದರು.

ಮಂಗಳವಾರ ಇಲ್ಲಿನ ನಕ್ಸಲ್ ಎನ್‌ಕೌಂಟರ್‌ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಎನ್‌ ಕೌಂಟರ್‌ನಲ್ಲಿ ಮೃತಪಟ್ಟ ವಿಕ್ರಂ ಗೌಡ ಯಾನೆ ವಿಕ್ರಮ್ ಗೌಡ್ಲು ಯಾನೆ ಶ್ರೀಕಾಂತ್ (46) ಕಬಿನಿ-2 ದಳವನ್ನು ಮುನ್ನಡೆಸುತ್ತಿದ್ದ. ಈ ಭಾಗದಲ್ಲಿ ನಕ್ಸಲ್ ಓಡಾಟದ ಬಗ್ಗೆ ಆಂತರಿಕ ಭದ್ರತಾ ವಿಭಾಗಕ್ಕೆ 10 ದಿನಗಳಿಂದ ಖಚಿತ ಮಾಹಿತಿ ಇತ್ತು. ಅದರಂತೆ ಎಎನ್ಎಫ್ ಎಸ್ಪಿ ಜಿತೇಂದ್ರ ದಯಾಮ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಗೆ ನ.10ರಿಂದಲೇ ಸಿದ್ಧತೆಗಳನ್ನು ನಡೆಸಲಾಗಿತ್ತು. ಅಲ್ಲದೆ, ಐಎಸ್‌ಎಫ್‌ನ ಡಿಜಿಪಿ ಪ್ರಣಬ್‌ ಮೋಹನ್ ಕೂಡ ಬಂದು ಕೂಂಬಿಂಗ್‌ನಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದರು. ಈ ಕಾರ್ಯಾಚರಣೆಗೆ ಬೆಂಗಳೂರಿನಿಂದ ಐಎಸ್ಎಫ್‌ನ 75 ಮತ್ತು ಶಿವಮೊಗ್ಗದಿಂದ 25 ಪೊಲೀಸರನ್ನು ವಿಶೇಷವಾಗಿ ಕರೆಸಲಾಗಿತ್ತು. ಕಾರ್ಯಾಚರಣೆ ಫಲ ನೀಡಿದೆ ಎಂದರು.

ವಿಕ್ರಂ ಗೌಡನ ಮನೆಯವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ, ಮನೆಯವರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಇನ್ನೂ 4-5 ಸಕ್ರಿಯ ನಕ್ಸಲ್‌ಗಳಿದ್ದಾರೆ. ಈ ಎನ್‌ಕೌಂಟರ್‌ ನಂತರ ಅವರ ಪ್ರತಿಕ್ರಿಯೆ ಏನಿರುತ್ತದೆ ಕಾದು ನೋಡಬೇಕಾಗಿದೆ ಎಂದು ಅವರು ತಿಳಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಉದ್ಯಾನಕ್ಕೆ ಮೀಸಲಿಟ್ಟ ಜಾಗದ ರಕ್ಷಣೆ ಡಿಸಿ, ಸ್ಥಳೀಯ ಸಂಸ್ಥೆ ಕರ್ತವ್ಯ: ಕೋರ್ಟ್‌
9 ಟನ್‌ ಮದ್ಯದ ಬಾಟಲ್‌, ಚಪ್ಪಲಿ ರಾಶಿ ತೆರವು - ಎಂ.ಜಿ.ರಸ್ತೆಯಲ್ಲಿ ಕಡಿವಾಣಕ್ಕೆ ಬೇಸರ