51 ಮಂದಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪಡೆಯಲು ನೆರವಾದ ಸೂರ್ಯ

Published : Aug 07, 2025, 01:04 PM IST
Surya

ಸಾರಾಂಶ

15 ವರ್ಷಗಳನ್ನು ಪೂರೈಸಿದ ಅಗರಂ ಫೌಂಡೇಷನ್‌ ಮೂಲಕ ಇಲ್ಲಿಯವರೆಗೂ 8 ಸಾವಿರ ಮಂದಿಯನ್ನು ಸೂರ್ಯ ಓದಿಸಿದ್ದಾರೆ.

 ಸಿನಿವಾರ್ತೆ

ಒಂದು ದೊಡ್ಡ ಕಾರ್ಯಕ್ರಮದ ವೇದಿಕೆ ಮುಂದೆ ಕೂತಿದ್ದ ಸೂರ್ಯ ಅವರಿಗೆ ವಿದ್ಯಾರ್ಥಿಗಳು ಸಾಲಾಗಿ ಬಂದು ಒಣ ಮೀನುಗಳನ್ನು ತುಂಬಿದ ಬುಟ್ಟಿ, ಹಲಸಿನ ಕಾಯಿ, ಶೇಂಗಾ, ಧಾನ್ಯಗಳು, ಗೆಡ್ಡೆ-ಗೆಣಸು ಉಡುಗೊರೆಯಾಗಿ ನೀಡುವ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ನಟ ಸೂರ್ಯ ಇಂಥ ಅಪರೂಪದ ಉಡುಗೊರೆ ಸ್ವೀಕರಿಸಿದ್ದು ತಮ್ಮದೇ ಅಗರಂ ಫೌಂಡೇಷನ್‌ನ ಆರ್ಥಿಕ ನೆರವಿನಿಂದ ಓದಿ ವಿದ್ಯಾವಂತರಾದವರಿಂದ. 15 ವರ್ಷಗಳನ್ನು ಪೂರೈಸಿದ ಅಗರಂ ಫೌಂಡೇಷನ್‌ ಮೂಲಕ ಇಲ್ಲಿಯವರೆಗೂ 8 ಸಾವಿರ ಮಂದಿಯನ್ನು ಸೂರ್ಯ ಓದಿಸಿದ್ದಾರೆ. ಈ ಪೈಕಿ 51 ಮಂದಿ ವೈದ್ಯ ಪದವೀಧರರಾಗಿದ್ದಾರೆ. 1880 ಮಂದಿ ಇಂಜಿನಿಯರ್ಸ್‌ ಆಗಿದ್ದಾರೆ. ಬಹುತೇಕ ಎಲ್ಲರೂ ರೈತ ಕುಟುಂಬಗಳಿಂದ ಬಂದ ಬಡ ವಿದ್ಯಾರ್ಥಿಗಳೇ ಆಗಿದ್ದು, ಇವರ ಸಾಧನೆ ನೋಡಿ ಸ್ವತಃ ಸೂರ್ಯ ಅವರೇ ಭಾವುಕರಾಗಿ ಕಣ್ಣೀರು ಹಾಕಿದ್ದರು.

ತಮಗೆ ವಿದ್ಯೆ ಕೊಡಿಸಿದ ನಟ ಸೂರ್ಯ ಅವರಿಗೆ ತಮ್ಮ ಭೂಮಿಯಲ್ಲಿ ಬೆ‍ಳೆದ ಉತ್ಪನ್ನಗಳನ್ನೇ ಉಡುಗೊರೆಯಾಗಿ ನೀಡುವ ಮೂಲಕ ಅಪರೂಪದ ಕ್ಷಣಗಳಿಗೆ ಸಾಕ್ಷಿ ಆದರು.

PREV
Read more Articles on

Recommended Stories

ಆ. 15ಕ್ಕೆ ದಿ ಡೆವಿಲ್ ಚಿತ್ರದ ಹಾಡು ಬಿಡುಗಡೆ : ದರ್ಶನ್‌ ಬೈಗುಳವನ್ನೇ ಹಾಡಿನ ಸಾಲಾಗಿಸಿದ ನಿರ್ದೇಶಕ
ಅಮಿತಾಬ್ ಸಿನಿಮಾದಿಂದ ಹೊರನಡೆದ ದೀಪಿಕಾ ಪಡುಕೋಣೆ ನಟನೆ ಬದಲು ನಿರ್ಮಾಣಕ್ಕಿಳಿದ ಸ್ಟಾರ್ ನಟಿ