ಸಿನಿವಾರ್ತೆ

‘ನಾನು ವಿಷ್ಣು ಸಾರ್ ದೊಡ್ಡ ಅಭಿಮಾನಿ. ಅವರಂತೆಯೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ಅವರ ಸಿನಿಮಾಗಳನ್ನು ಬ್ಲಾಕ್ ಟಿಕೆಟ್ ತಗೊಂಡು ನೋಡ್ತಿದ್ದೆ. ಅವರು, ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎನ್ನುತ್ತಿದ್ದರು’ ಎಂದು ಗೋಲ್ಡನ್‌ಸ್ಟಾರ್‌ ಗಣೇಶ್ ಹೇಳಿದರು.

ಕೋಟಿಗೊಬ್ಬ’ ಚಿತ್ರ ಬಿಡುಗಡೆಯಾಗಿ 25 ವರ್ಷ

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ‘ಕೋಟಿಗೊಬ್ಬ’ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾದ ಪ್ರಯುಕ್ತ ನಿರ್ಮಾಪಕ ಸೂರಪ್ಪಬಾಬು ಆಯೋಜಿಸಿದ್ದ ‘ಕೋಟಿಗೊಬ್ಬ 25ನೇ ವರ್ಷದ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವಿಷ್ಣುವರ್ಧನ್ ಜೊತೆಗಿನ ಒಡನಾಟ ಹಂಚಿಕೊಂಡ ಸೂರಪ್ಪಬಾಬು

ಈ ವೇಳೆ ನಿರ್ಮಾಪಕ ಸೂರಪ್ಪಬಾಬು ವಿಷ್ಣುವರ್ಧನ್ ಜೊತೆಗಿನ ಒಡನಾಟ ಹಂಚಿಕೊಂಡರು.

ಉಪೇಂದ್ರ ಮಾತನಾಡಿ, ‘ವಿಷ್ಣು ಅವರನ್ನು ಮಾತಾಡಿಸಬೇಕೆಂದೇ ಅವರ ಮನೆಗೆ ಹೋಗುತ್ತಿದೆ. ಅಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳುತ್ತಿದ್ದರು. ಅಂಥ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಫೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕುತ್ತಿವೆ ಎಂದು ನನ್ನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದರು’ ಎಂದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕಲಾವಿದರಾದ ದೇವರಾಜ್‌, ಪ್ರಿಯಾಂಕ ಉಪೇಂದ್ರ, ಗಣೇಶ್, ನಿರ್ದೇಶಕ ನಾಗಣ್ಣ ಭಾಗವಹಿಸಿದ್ದರು.