ವಿಮಾನದಲ್ಲಿ ಬಾಂಬ್ ಇದೆ ಎನ್ನುವ ಹುಸಿ ಬೆದರಿಕೆ ಕರೆಗಳು ಈ ನಡುವೆ ಹೆಚ್ಚಾಗುತ್ತಿದ್ದಂತೆ ಅಮೆರಿಕದಲ್ಲಿ ಇನ್ನೊಂದು ರೀತಿಯ ಹಾಸ್ಯಮಯ ಪ್ರಸಂಗ ನಡೆದಿದೆ. ವಿಮಾನದ ಶೌಚಾಲಯದಲ್ಲಿ ಯಾರೋ ವ್ಯಕ್ತಿ ವಯಸ್ಕರ ಡೈಪರ್ ಸರಿಯಾಗಿ ಕಸದ ಬುಟ್ಟಿಯಲ್ಲಿ ಬಿಸಾಡದೆ, ನೆಲದ ಮೇಲೆ ಬಿಸಾಡಿದ್ದ. ಇದನ್ನು ಕಂಡ ಸಿಬ್ಬಂದಿ ಇದು ಬಾಂಬ್ ಇರಬಹುದು ಎಂದು ಅಂದುಕೊಂಡು ವಿಮಾನವನ್ನು ಪನಾಮಾ ವಿಮಾನದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಬಳಿಕ ಎಲ್ಲ ರೀತಿಯ ಪರೀಕ್ಷೆ ಮಾಡಿಸಿದಾಗ ಅದು ಡೈಪರ್ ಎಂದು ಪತ್ತೆಯಾಗಿದೆ. ನಮ್ಮ ಹಿರಿಯರು ಸುಮ್ಮನೇ ಹೇಳಿಲ್ಲ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತ!