ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಸೂಪರ್‌ಹೀರೋ - ಅಟ್ಲಿ ನಿರ್ದೇಶನದಲ್ಲಿ ಸೈಫೈ ಆ್ಯಕ್ಷನ್ ಥ್ರಿಲ್ಲರ್

ಸಾರಾಂಶ

ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಸೂಪರ್‌ಹೀರೋ

ಅಟ್ಲಿ ನಿರ್ದೇಶನದಲ್ಲಿ ಸೈಫೈ ಆ್ಯಕ್ಷನ್ ಥ್ರಿಲ್ಲರ್

  ಸಿನಿವಾರ್ತೆ

‘ಪುಷ್ಪ 2’ ಗೆಲುವಿನಲ್ಲಿ ಬೀಗುತ್ತಿರುವ ಅಲ್ಲು ಅರ್ಜುನ್ ಇದೀಗ ಸೂಪರ್‌ಹೀರೋ ಆಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಅವರ ಹೊಸ ಸೈನ್ಸ್‌ ಫಿಕ್ಷನ್‌ ಆ್ಯಕ್ಷನ್‌ ಥ್ರಿಲ್ಲರ್‌ ಘೋಷಣೆಯಾಗಿದೆ.

ಈ ಸಿನಿಮಾ ಕುರಿತು ಅಲ್ಲು ಅರ್ಜುನ್‌, ‘ಮಾಸ್‌ ಜೊತೆಗೆ ಮ್ಯಾಜಿಕ್‌, ನಮ್ಮ ಹೊಸ ಸಿನಿಮಾದಲ್ಲಿರುವುದು ಕಲ್ಪನೆಗೂ ಮೀರಿದ ಪ್ರಪಂಚ. ಸನ್‌ ಪಿಕ್ಚರ್ಸ್‌ ಬೆಂಬಲದೊಂದಿಗೆ ಅದ್ಭುತ ಕಾರ್ಯವೊಂದಕ್ಕೆ ನಿರ್ದೇಶಕ ಅಟ್ಲಿ ಜೊತೆ ಕೈಜೋಡಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಅಲ್ಲು ಅರ್ಜುನ್ 43ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಇದೊಂದು ಬಹುಕೋಟಿ ಬಜೆಟ್‌ನ ಸೈನ್ಸ್‌ ಫಿಕ್ಷನ್‌ ಆಗಿದ್ದು, ಭಾರತ ಮತ್ತು ಅಮೆರಿಕಾದ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ವಿಎಫ್‌ಎಕ್ಸ್ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

ಅದಕ್ಕೆ ಪೂರಕವಾಗಿ ಲಾಸ್ ಏಂಜಲೀಸ್‌ನಲ್ಲಿರುವ ವಿಎಫ್ ಎಕ್ಸ್ ಸ್ಟುಡಿಯೋಗೆ ಅಟ್ಲಿ ಹಾಗೂ ಅಲ್ಲು ಅರ್ಜುನ್‌ ಭೇಟಿ ನೀಡಿರುವ ವೀಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. ನಿರ್ದೇಶಕ ಅಟ್ಲಿ, ‘ಈ ಚಿತ್ರದ ಚಿತ್ರಕತೆ ವರ್ಷಗಟ್ಟಲೆ ಕೆಲಸ ನಡೆದಿದೆ’ ಎಂದು ಹೇಳಿರುವುದು ನಿರೀಕ್ಷೆ ಹೆಚ್ಚಿಸಿದೆ. ಇದಲ್ಲದೇ ಅಲ್ಲು ಅರ್ಜುನ್ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಅವರ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Share this article