ಕನ್ನಡಪ್ರಭ ವಾರ್ತೆ, ತುಮಕೂರು ನಗರದ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ನಾಟಕಮನೆ ತುಮಕೂರು ಆಯೋಜಿಸಿದ್ದ ಮಹಾಕವಿ ಭಾಸನ ಮಧ್ಯಮ ವ್ಯಾಯೋಗ, ಧೂತ ಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ ನಾಟಕಗಳನ್ನು ಸಂಯೋಗಿಸಿಕೊಂಡು ಪ್ರದರ್ಶಸಿದ “ಭಾಸ ಭಾರತ”ರಂಗಪ್ರಯೋಗ ಯಶಸ್ವಿಯಾಗಿ ಮೂಡಿಬಂದಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ರಂಗಸಂಘಟಕ ಉಗಮ ಶ್ರೀನಿವಾಸ್, ಸುಗಮ ಸಂಗೀತ ಗಾಯಕ ಕೆಂಕೆರೆ ಮಲ್ಲಿಕಾರ್ಜುನ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮಯ್ಯ, ಮಿಮಿಕ್ರಿ ಈಶ್ವರಯ್ಯ, ಗೋಪಾಲಯ್ಯ, ಕುಮಾರಸ್ವಾಮಿ, ಸಣ್ಣಹೊನ್ನಯ್ಯ ನಾಟಕಮನೆ ಮಹಾಲಿಂಗು ಅವರು ಇದ್ದರು. ನಾಟಕದಲ್ಲಿ ಅಳವಡಿಸಲಾದ ಸಂಗೀತ, ವಿಶಿಷ್ಟ ರೀತಿಯ ವೇಷಭೂಷಣ, ರಂಗಸಜ್ಜಿಕೆ, ಕಲಾವಿದರ ನಟನೆ ಎಲ್ಲವೂ ಒಟ್ಟಾರೆಯಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.