‘ನನಗೆ ಸಾಕಷ್ಟು ಪ್ರತಿಭೆ ಇದೆ. ಆ ಪ್ರತಿಭೆಯ ಬಲದಿಂದ ಒಳ್ಳೊಳ್ಳೆ ಅವಕಾಶ ಪಡೆಯುವ ಆತ್ಮವಿಶ್ವಾಸ ಇದೆ. ಹೀಗಿರುವಾಗ ಅವಕಾಶಕ್ಕಾಗಿ ಲೈಂಗಿಕತೆಯಂಥಾ ಕೀಳುಮಟ್ಟಕ್ಕೆ ಇಳಿಯುವ ಪ್ರಶ್ನೆಯೇ ಬರೋದಿಲ್ಲ.’
ಇದೇ ವೇಳೆ ಕೊಂಚ ಅಸಭ್ಯವಾಗಿ ನೆಟ್ಟಿಗರೊಬ್ಬರು, ‘ವರ್ಜಿನಿಟಿ ಕಳೆದುಕೊಂಡದ್ದು ಹೇಗೆ? ಅನುಭವ ಹೇಗಿತ್ತು?’ ಎಂದು ಕೇಳಿದ ಪ್ರಶ್ನೆಗೂ ಚೈತ್ರಾ ಬೋಲ್ಡ್ ಆಗಿಯೇ ಉತ್ತರ ನೀಡಿದ್ದಾರೆ. ‘ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಇರುತ್ತಾರೆ. ಅಥವಾ ಅಕ್ಕ, ತಂಗಿಯರು ಇರುತ್ತಾರೆ. ಅವರ ಬಳಿ ಈ ಕುರಿತ ವಿವರ ಪಡೆದುಕೊಳ್ಳಿ’ ಎಂದು ಉತ್ತರಿಸಿದ್ದಾರೆ.
ಸದ್ಯ ಚೈತ್ರಾ ಆಚಾರ್ ತಮಿಳಿನಲ್ಲಿ ನಟ ಸಿದ್ದಾರ್ಥ ಜೊತೆಗೆ ಒಂದು ಸಿನಿಮಾಕ್ಕೆ ನಾಯಕಿಯಾಗಿದ್ದಾರೆ. ಕನ್ನಡದಲ್ಲೂ ಒಂದೆರಡು ಚಿತ್ರಗಳು ಅವರ ಕೈಯಲ್ಲಿವೆ.