;Resize=(412,232))
ಸಿನಿವಾರ್ತೆ
ಅಚ್ಚರಿ ಆದರೂ ಇಂಥದ್ದೊಂದು ವರದಿ ಬಂದಿದೆ. ಅಂದಹಾಗೆ ಹೀಗೆ ಅಕ್ರಮವಾಗಿ ಡೌನ್‌ಲೋಡ್‌ಗೆ ತುತ್ತಾಗಿ ಅತಿ ಹೆಚ್ಚು ಬಾರಿ ಪೈರಸಿ ಆದ ಸಿನಿಮಾ ಎನಿಸಿಕೊಂಡಿರುವುದು ‘ಧುರಂಧರ್’. ಹೀಗೆ ಡೌನ್‌ಲೋಡ್ ಆಗಿರುವುದು ಭಾರತದಲ್ಲಿ ಅಲ್ಲ, ಪಾಕಿಸ್ತಾನದಲ್ಲಿ ಎಂಬುದು ಮತ್ತೊಂದು ಅಚ್ಚರಿ.
ಸ್ಪೈ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿರುವ ‘ಧುರಂಧರ್’ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ. ಆದರೆ, ನಿಷೇಧದ ನಡುವೆಯೂ ಪಾಕಿಸ್ತಾನದ ಪ್ರಜೆಗಳು ದೊಡ್ಡ ಸಂಖ್ಯೆಯಲ್ಲಿ ಈ ಚಿತ್ರವನ್ನು ನೋಡಿದ್ದಾರೆ ಎನ್ನಲಾಗಿದ್ದು, ಕೇವಲ ಎರಡು ವಾರದಲ್ಲಿ 20 ಲಕ್ಷ ಬಾರಿ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಅಕ್ರಮವಾಗಿ ಡೌನ್‌ಲೋಡ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ನಿಷೇಧ ಮಾಡಿದರೂ ಪಾಕಿಸ್ತಾನದಲ್ಲಿ ಸಿನಿಮಾ ಸೂಪರ್‌ಹಿಟ್ ಆಗಿದೆ. ಆದರೆ ಚಿತ್ರತಂಡಕ್ಕೆ ಇದರಿಂದ ಅಂದಾಜು 50 ಕೋಟಿ ನಷ್ಟ ಆಗಿದೆ ಎಂದು ಪರಿಣತರು ತಿಳಿಸಿದ್ದಾರೆ.