ದರ್ಶನ್‌ಗೆ ಯುರೋಪ್ ವೀಸಾ ನಿರಾಕರಣೆ : ಸ್ವಿಟ್ಜರ್‌ಲ್ಯಾಂಡ್‌ ಬದಲು ಥೈಲ್ಯಾಂಡಿಗೆ ಡೆವಿಲ್

Published : Jul 12, 2025, 11:37 AM IST
Actor darshan

ಸಾರಾಂಶ

ದರ್ಶನ್‌ ನಟನೆಯ ‘ಡೆವಿಲ್‌’ ಸಿನಿಮಾದ ಹಾಡಿನ ಚಿತ್ರೀಕರಣ ನಾಳೆಯಿಂದ (ಜು.13) ಥೈಲ್ಯಾಂಡ್‌ನಲ್ಲಿ ನಡೆಯಲಿದೆ. ಹತ್ತು ದಿನಗಳಿಗೂ ಹೆಚ್ಚು ಕಾಲ ಚಿತ್ರತಂಡ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಚಿತ್ರೀಕರಣ ನಡೆಸಲಿದೆ.

 ಸಿನಿವಾರ್ತೆ :  ದರ್ಶನ್‌ ನಟನೆಯ ‘ಡೆವಿಲ್‌’ ಸಿನಿಮಾದ ಹಾಡಿನ ಚಿತ್ರೀಕರಣ ನಾಳೆಯಿಂದ (ಜು.13) ಥೈಲ್ಯಾಂಡ್‌ನಲ್ಲಿ ನಡೆಯಲಿದೆ. ಹತ್ತು ದಿನಗಳಿಗೂ ಹೆಚ್ಚು ಕಾಲ ಚಿತ್ರತಂಡ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಚಿತ್ರೀಕರಣ ನಡೆಸಲಿದೆ.

ಹಿಂದೆ ಈ ಚಿತ್ರದ ಶೂಟಿಂಗ್‌ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಸುವ ಪ್ಲಾನ್‌ ಆಗಿತ್ತು ಎನ್ನಲಾಗಿದೆ. ದರ್ಶನ್‌ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್‌ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ಅವರ ಹೆಚ್ಚಿನ ಸಿನಿಮಾಗಳ ಶೂಟಿಂಗ್‌ ಅಲ್ಲೇ ನಡೆದಿತ್ತು. ಇದೀಗ ಈ ಸಿನಿಮಾದ ಹಾಡಿನ ಚಿತ್ರೀಕರಣವನ್ನು ಅಲ್ಲೇ ನಡೆಸಲು ಯೋಜಿಸಲಾಗಿತ್ತು. ಆದರೆ ಈ ಬಾರಿ ದರ್ಶನ್‌ ಮೇಲೆ ಆರೋಪ ಇರುವ ಕಾರಣ ಸ್ವಿಟ್ಜರ್‌ಲ್ಯಾಂಡ್‌ ಸರ್ಕಾರ ವೀಸಾ ನಿರಾಕರಿಸಿದೆ.

ಈ ಹಿಂದೆ ಯುರೋಪ್ ಕೂಡ ವೀಸಾ ನಿರಾರಿಸಿತ್ತು ಎನ್ನಲಾಗಿದೆ. ಥೈಲ್ಯಾಂಡ್‌ನಲ್ಲಾದರೆ ಅಲ್ಲಿಗೆ ಹೋಗಿಯೇ ಪಡೆಯಬಹುದಾದ ವೀಸಾ ಆನ್ ಅರೈವಲ್‌ ವ್ಯವಸ್ಥೆ ಇರುವ ಕಾರಣ ಚಿತ್ರತಂಡ ಅಲ್ಲಿ ಚಿತ್ರೀಕರಣ ನಡೆಸಲು ಪ್ಲಾನ್‌ ಮಾಡಿದೆ. ಈ ಹಾಡಿನ ಚಿತ್ರೀಕರಣ ಮುಗಿದರೆ ‘ಡೆವಿಲ್‌’ ಸಿನಿಮಾದ ಶೂಟಿಂಗ್‌ ಸಂಪೂರ್ಣ ಮುಕ್ತಾಯಗೊಳ್ಳುತ್ತದೆ.

ಪ್ರಕಾಶ್‌ ವೀರ್‌ ನಿರ್ದೇಶನದ ‘ಡೆವಿಲ್‌’ ಸಿನಿಮಾಕ್ಕೆ ಜೆ ಜಯಮ್ಮ ನಿರ್ಮಾಪಕರು.

 

PREV
Read more Articles on

Latest Stories

ರವಿಶಂಕರ್‌ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್‌ ಮಾಸಿ ತಯಾರಿ
ಶಿವಾಯ ಮನಃ : ಜನಗಳ ಮನ ಗೆದ್ದ ರಾಜರತ್ನನಿಗೆ 63
ನನ್ನ ಹೃದಯ ಗೆದ್ದವರು ಶಿಲ್ಪಾ ಶೆಟ್ಟಿ : ರೀಷ್ಮಾ ನಾಣಯ್ಯ