;Resize=(412,232))
ಬೆಳಗಾವಿ : ಅಭಿಮಾನಿಗಳು ಹೊಡೆದಾಡುವ ಅವಶ್ಯಕತೆ ಇಲ್ಲ. ನಿಮಗೆಲ್ಲರಿಗೂ ನಿಮ್ಮ, ನಿಮ್ಮ ಬದುಕು ದೊಡ್ಡದು. ನಿಮ್ಮ ಬದುಕು ಕಟ್ಟಿಕೊಂಡರೆ, ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತಲೂ ದೊಡ್ಡ ಖುಷಿ ಏನು ಇಲ್ಲ ಎಂದು ಖ್ಯಾತ ನಟ ಡಾಲಿ ಧನಂಜಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸ್ಟಾರ್ ನಟರ ಅಭಿಮಾನಿಗಳ ವಾರ್ ವಿಚಾರವಾಗಿ ಮಾತನಾಡಿ, ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಿಮಗೆಲ್ಲರಿಗೂ ನಿಮ್ಮ, ನಿಮ್ಮ ಬದುಕು ದೊಡ್ಡದು. ಅಭಿಮಾನಿಗಳಿಗೂ ಅವರವರ ಬದುಕು, ತಂದೆ, ತಾಯಿ, ಫ್ಯಾಮಿಲಿ ಇರುತ್ತದೆ. ಅಭಿಮಾನಿಗಳು ಹೊಡೆದಾಡುವ ಅವಶ್ಯಕತೆ ಇಲ್ಲ. ಅಭಿಮಾನಿಗಳು ಎಲ್ಲಾ ಕನ್ನಡ ಸಿನಿಮಾವನ್ನು ಖುಷಿಯಾಗಿ ನೋಡಬೇಕು. ಇಷ್ಟ ಆದಾಗ ಹೇಳಿ, ಇಷ್ಟ ಆಗದೇ ಇದ್ದಾಗಲೂ ಹೇಳಿ, ತಿದ್ದುಕೊಳ್ಳುತ್ತೇವೆ. ನೀವು ಚೆನ್ನಾಗಿರಿ. ನಿಮ್ಮ ಬದುಕು ಕಟ್ಟಿಕೊಂಡರೆ ನಿಮ್ಮ ಸ್ಟಾರ್‌ಗಳಿಗೆ ಅದಕ್ಕಿಂತಲೂ ದೊಡ್ಡ ಖುಷಿ ಏನು ಇಲ್ಲ ಎಂದು ಹೇಳಿದರು.
ನಾಡು, ನುಡಿ ವಿಚಾರಕ್ಕೆ ನಾವು ಇರಲೇಬೇಕು, ಇರ್ತಿವಿ, ಅದೇ ನಮ್ಮ ಉಸಿರು ಎಂದರು.