ಗಮನ ಸೆಳೆಯುವ ಚಿತ್ರಕಥೆ, ಅಮೋಘ ನಟನೆ - ಡಾರ್ಕ್‌ ಹ್ಯೂಮರ್‌ ಫ್ಯಾಮಿಲಿ ಡ್ರಾಮಾದಲ್ಲಿ ಫ್ಯಾಮಿಲಿ ಪ್ಯಾಕೇಜ್‌

KannadaprabhaNewsNetwork |  
Published : Jul 27, 2024, 12:45 AM ISTUpdated : Jul 27, 2024, 06:36 AM IST
Film theater

ಸಾರಾಂಶ

ಡಾರ್ಕ್‌ ಹ್ಯೂಮರ್‌ ಫ್ಯಾಮಿಲಿ ಡ್ರಾಮಾದಲ್ಲಿ ಫ್ಯಾಮಿಲಿ ಪ್ಯಾಕೇಜ್‌ ಜೊತೆ ರೌಡಿಸಂ ಗಮ್ಮತ್ತು

ಚಿತ್ರ: ಫ್ಯಾಮಿಲಿ ಡ್ರಾಮಾ

ತಾರಾಗಣ : ರೇಖಾ ಕೂಡ್ಲಿಗಿ, ಪೂರ್ಣಚಂದ್ರ ಮೈಸೂರು, ಅಭಯ್‌ ಎಸ್‌, ಮಹಾದೇವ್‌ ಹಡಪದ್‌, ಸಿಂಧೂ ಶ್ರೀನಿವಾಸ ಮೂರ್ತಿ

ನಿರ್ದೇಶನ: ಆಕರ್ಷ್‌ ಹೆಚ್‌ ಪಿ

ರೇಟಿಂಗ್‌ : 3

- ಪ್ರಿಯಾ ಕೆರ್ವಾಶೆ

ಒಂದೇ ಏಟಿಗೆ ವ್ಯಕ್ತಿಯನ್ನು ಹೊಡೆದು ಬಿಸಾಕೋದು ರೌಡಿಗಳಿಗೆ ಸಲೀಸು. ಆದೇ ತರಕಾರಿಯನ್ನಷ್ಟೇ ಕೊಚ್ಚಿ ಗೊತ್ತಿರುವ ಶ್ರೀಸಾಮಾನ್ಯನಿಗೆ ಇದು ಕನಸಲ್ಲೂ ಊಹಿಸಲಾಗದ ಟಾಸ್ಕ್‌. ದುಡ್ಡಿಗೆ ಆಸೆ ಪಡುವ, ಕೆಳ ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಕೊಲೆಯಂಥಾ ಟಾಸ್ಕ್‌ ಎದುರಾದಾಗ, ಅವರಿಗೆ ಅದನ್ನು ನಿರ್ವಹಿಸಲು ಸಾಧ್ಯವಾಯಿತಾ ಅನ್ನೋದೇ ಫ್ಯಾಮಿಲಿ ಡ್ರಾಮಾದ ಒನ್‌ಲೈನ್‌.ಕೆಳ ಮಧ್ಯಮ ವರ್ಗದ ಜೀವನ ಶೈಲಿ, ಆಸೆಗಳು, ಆಸೆ ಪೂರೈಸಲು ಕಂಡುಕೊಳ್ಳುವ ಶಾರ್ಟ್‌ಕಟ್‌ಗಳು, ಇವುಗಳ ಜೊತೆಗೆ ನಾಟಕೀಯವಾಗಿ ಮುಖಾಮುಖಿಯಾಗುವ ರೌಡಿಸಂ ಜಗತ್ತು ಇವನ್ನೆಲ್ಲ ಸಿನಿಮಾ ಪ್ಯಾರಲಲ್‌ ಫ್ರೇಮ್‌ನೊಳಗೆ ಕಟ್ಟಿಕೊಡುತ್ತದೆ.

ಯುವ ನಿರ್ದೇಶಕ ಆಕರ್ಷ್‌ ಅವರ ಚಿತ್ರಕಥೆ, ಸಿನಿಮಾ ನಿರೂಪಿಸಿದ ರೀತಿಯಲ್ಲಿ ಹೊಸತನವಿದೆ. ಹಾಸ್ಯ, ಕ್ರೈಮ್‌ಗಳೆರಡನ್ನೂ ಏಕಕಾಲದಲ್ಲಿ ಬಹಳ ಸಹಜವಾಗಿ ತರುವ ಇವರ ಚುರುಕು ಬರವಣಿಗೆ ಗಮನಸೆಳೆಯುತ್ತದೆ. ಆದರೆ ಡಾರ್ಕ್‌ ಹ್ಯೂಮರ್‌ನ ಪ್ರಮುಖ ಗುಣವಾದ ವೇಗ ಸಿನಿಮಾದಲ್ಲಿ ಮಿಸ್‌ ಆಗಿದೆ.ಮನಸ್ಸಲ್ಲುಳಿಯುವ ಮತ್ತೊಂದು ಅಂಶ ಅಂದರೆ ಒಬ್ಬರನ್ನೊಬ್ಬರು ಮೀರಿಸುವಂಥಾ ನಟನೆ. ರೇಖಾ ಕೂಡ್ಲಿಗಿ ಅವರಂತೂ ಕೆಳ ಮಧ್ಯಮ ವರ್ಗದ ಅಮ್ಮನ ಸರ್ವ ಗುಣಗಳನ್ನೂ ಆವಾಹಿಸಿಕೊಂಡು ಅದ್ಭುತವಾಗಿ ಪಾತ್ರಕ್ಕೆ ಧಾರೆ ಎರೆದಿದ್ದಾರೆ. ವಿಲಕ್ಷಣ ಅಪ್ಪನ ಪಾತ್ರದಲ್ಲಿ ಮಹಾದೇವ್‌ ಹಡಪದ್‌ ಇವರನ್ನು ಸರಿಗಟ್ಟಿದ್ದಾರೆ. ಫ್ಯಾಮಿಲಿ ಟೀಮ್‌, ರೌಡಿ ಗ್ಯಾಂಗ್‌ಗಳಲ್ಲಿ ಪೂರ್ಣಚಂದ್ರ, ಅಭಯ್‌, ಸಿಂಧೂ, ಮಾಲತೇಶ್‌, ಅನನ್ಯಾ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇದೊಂದು ಎಂಟರ್‌ಟೈನಿಂಗ್‌ ಸಿನಿಮಾವಂತೂ ಹೌದು, ಆದರೆ ಪ್ರೇಕ್ಷಕನ ಮಿದುಳಿಗೂ ಸ್ವಲ್ಪ ಕೆಲಸ ಕೊಟ್ಟು, ಕಥೆಯ ವೇಗ ಹೆಚ್ಚಿಸಿದ್ದರೆ ಸಿನಿಮಾ ನೆಕ್ಷ್ಟ್ ಲೆವೆಲ್‌ ತಲುಪುತ್ತಿತ್ತು.

PREV

Recommended Stories

ನನ್‌ ಬಗ್ಗೆ ಏನಂದ್ರೂ ಸಹಿಸ್ತೀನಿ, ಫ್ಯಾಮಿಲಿ ಬಗ್ಗೆ ತಪ್ಪಾಗಿ ಮಾತನಾಡಕೂಡದು: ಅಂಕಿತಾ ಅಮರ್
ಆ.24ಕ್ಕೆ ಇದ್ರೆ ನೆಮ್ದಿಯಾಗ್‌ ಇರ್ಬೇಕ್‌ ಹಾಡು ಬಿಡುಗಡೆ