200 ಕೋಟಿ ಕ್ಲಬ್‌ನತ್ತ ದರ್ಶನ್‌ ನಟನೆಯ ಕಾಟೇರ ಸಿನಿಮಾ

KannadaprabhaNewsNetwork |  
Published : Jan 19, 2024, 01:45 AM ISTUpdated : Jan 19, 2024, 09:11 AM IST
Kaatera

ಸಾರಾಂಶ

ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ದಾಖಲೆಯ 200 ಕೋಟಿ ರು. ಗಳಿಕೆಯತ್ತ ಹೆಜ್ಜೆ ಹಾಕಿದೆ ಎನ್ನಲಾಗಿದೆ.

ಕನ್ನಡಪ್ರಭ ಸಿನಿವಾರ್ತೆ

ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ದಾಖಲೆಯ 200 ಕೋಟಿ ರು. ಗಳಿಕೆಯತ್ತ ಹೆಜ್ಜೆ ಹಾಕಿದೆ ಎನ್ನಲಾಗಿದೆ. 

ತಜ್ಞರ ಲೆಕ್ಕಾಚಾರದ ಪ್ರಕಾರ ಈ ಚಿತ್ರ 18 ದಿನಗಳಲ್ಲಿ 190.89 ಕೋಟಿ ರು. ಕಲೆಕ್ಷನ್‌ ಮಾಡಿದೆ. ಈ ಸಿನಿಮಾ ಗಳಿಕೆ ಈ ವಾರ 200 ಕೋಟಿ ರು. ದಾಟಬಹುದು ಎಂದು ಅಂದಾಜಿಸಲಾಗಿದೆ. 

ವೀಕೆಂಡ್‌, ಸಂಕ್ರಾಂತಿ ಹಬ್ಬದ ಸಾಲು ರಜೆಗಳಲ್ಲಿ ‘ಕಾಟೇರ’ ರಾಜ್ಯದ ಹಲವೆಡೆ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಚಿತ್ರದ ಈ ಮೂರು ದಿನಗಳ ಗಳಿಕೆಯೇ 33.47 ಕೋಟಿ ರು.ಗೂ ಹೆಚ್ಚಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. 

ವೀಕೆಂಡ್‌ನ ಎರಡು ರಜಾದಿನ ಹಾಗೂ ಸಂಕ್ರಾಂತಿ ದಿನ ಸುಮಾರು 5622 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದ್ದು, ಇದರಲ್ಲಿ 3864 ಶೋಗಳು ಹೌಸ್ ಆಗಿವೆ ಎನ್ನಲಾಗಿದೆ.

ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಚಿತ್ರವೊಂದು ಈ ಮಟ್ಟಿನ ಕಲೆಕ್ಷನ್‌ ಮಾಡಿರುವುದು ದಾಖಲೆಯಾಗಿದೆ. ದರ್ಶನ್‌ ಹಾಗೂ ಆರಾಧನಾ ನಾಯಕ, ನಾಯಕಿಯಾಗಿ ನಟಿಸಿರುವ ‘ಕಾಟೇರ’ ಸಿನಿಮಾವನ್ನು ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶಿಸಿದ್ದು, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದಾರೆ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ