ಸಿನಿಮಾ ವಿತರಣೆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವೆಂಕಟ್ ಗೌಡ ಪತ್ನಿ ಮೀನಾ ವೆಂಕಟ್ ಗೌಡ ನಿರ್ಮಿಸಿರುವ ‘ಕಣ್ಣಾ ಮುಚ್ಚೆ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು.
ಮೂಲತಃ ಡ್ಯಾನ್ಸರ್ ಆಗಿರುವ ರವಿಕೃಷ್ಣ ನಾಯಕ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ತೇಜಸ್ವಿನಿ ಆನಂದಕುಮಾರ್ ನಾಯಕಿ. ತುಂಬಾ ವರ್ಷಗಳ ನಂತರ ರಾಜೇಶ್ ರಾಮ್‌ನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಉಗ್ರಂ ರವಿ, ನಾಗೇಂದ್ರ ಅರಸ್, ಕೃಷ್ಣ, ಮಮತಾ, ಪ್ರಶಾಂತ್ ಸಿದ್ದಿ, ಜಯಸೂರ್ಯ ಅಭಿನಯಿಸಿದ್ದಾರೆ. ಜಗನ್ ಬಾಬು ಕ್ಯಾಮೆರಾ ಚಿತ್ರಕ್ಕಿದೆ.
ವೆಂಕಟ್ ಗೌಡ, ‘ಲಾಕ್‌ಡೌನ್ ಹೊತ್ತಿನಲ್ಲಿ ಮಾಡಿರುವ ಸಿನಿಮಾ ಇದು. ತಾಂತ್ರಿಕವಾಗಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪ್ರೀತಿ- ಪ್ರೇಮದ ನೆರಳಿನಲ್ಲಿ ಮೂಡಿರುವ ಹೊಸ ಸಿನಿಮಾ ಇದು’ ಎಂದರು.