ಪಟಾಕಿಗೆ ಹೆದರಿ ಮನೆಯೊಳಗೆ15 ತಾಸು ಅಡಗಿ ಕುಳಿತ ಚಿರತೆ

KannadaprabhaNewsNetwork | Published : Nov 14, 2023 1:17 AM

ಸಾರಾಂಶ

ದೀಪಾವಳಿ ಆಚರಣೆ ವೇಳೆ ಸಿಡಿಸಿದ ಭಾರೀ ಪ್ರಮಾಣದ ಪಟಾಕಿಯ ಜೋರಾದ ಶಬ್ದಕ್ಕೆ ಬೆದರಿದ ಚಿರತೆಯೊಂದು ಮನೆಯೊಂದರ ಒಳಹೊಕ್ಕು 15 ತಾಸುಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ ಘಟನೆ ತಮಿಳು ನಾಡಿನಲ್ಲಿ ನಡೆದಿದೆ.

ದೀಪಾವಳಿ ಆಚರಣೆ ವೇಳೆ ಸಿಡಿಸಿದ ಭಾರೀ ಪ್ರಮಾಣದ ಪಟಾಕಿಯ ಜೋರಾದ ಶಬ್ದಕ್ಕೆ ಬೆದರಿದ ಚಿರತೆಯೊಂದು ಮನೆಯೊಂದರ ಒಳಹೊಕ್ಕು 15 ತಾಸುಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ ಘಟನೆ ತಮಿಳು ನಾಡಿನಲ್ಲಿ ನಡೆದಿದೆ. ಇಲ್ಲಿನ ಕೂನೂರ್‌ನಲ್ಲಿ ಪಟಾಕಿ ಸದ್ದಿಗೆ ಹೆದರಿ ಚಿರತೆ ಮನೆಗೆ ನುಗ್ಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಚಿರತೆಯಿಂದ ಮಹಿಳೆಯೋರ್ವಳನ್ನು ರಕ್ಷಿಸುವ ವೇಳೆ 6 ಮಂದಿ ಗಾಯಗೊಂಡಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿದ್ದಾರೆ. ಏನೇ ಹೇಳಿ ಚಿರತೆಯಾದರೇನೂ ಪ್ರಾಣಿಗಳು ತೀರಾ ಸೂಕ್ಷ್ಮ.

Share this article