ಸಿನಿವಾರ್ತೆ : ಮಯೂರ್ ಕಡಿ ನಿರ್ದೇಶನದ ‘ಮೊತೊಂದ ಹೇಳುವೆ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ. ಸತೀಶ್ ಚಿತ್ರದ ಉಳಿದ ಪಾತ್ರಧಾರಿಗಳು. ಚಿತ್ರವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಚಿತ್ರತಂಡದಿಂದ ಟ್ರೇಲರ್ ಡಿಕೋಡ್ ಸ್ಪರ್ಧೆ ರೂಪಿಸಲಾಗಿತ್ತು.
ಒಂದು ವಿಡಿಯೋ ಬಿಡುಗಡೆ ಮಾಡಿ ಇದರಲ್ಲಿ ಮ್ಯೂಟ್ ಮಾಡಿರುವ ಚಿತ್ರದ ನಾಯಕ ಹಾಗೂ ನಾಯಕಿಯ ಡೈಲಾಗ್‌ಗಳನ್ನು ಊಹಿಸಲು ಜನರಿಗೆ ಬಿಡಲಾಗಿತ್ತು. ಸರಿ ಉತ್ತರ ನೀಡಿದ ಮೊದಲ 5 ಜನರಿಗೆ ತಲಾ 5 ಸಾವಿರ ನಗದು ಬಹುಮಾನ ಘೋಷಿಸಲಾಗಿತ್ತು. ಈಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರತಂಡ ವಿಜೇತರ ಹೆಸರನ್ನು ಪ್ರಕಟಿಸುವ ಮೂಲಕ ಅವರಿಗೆ ನಗದು ಬಹುಮಾನ ನೀಡಲಿದೆ. ಜೂನ್ 20ಕ್ಕೆ ತೆರೆಗೆ ಬರಲಿದೆ.